2018ರ ಮಾರ್ಚ್‍ಗೆ ಇಸ್ರೋ ಚಂದ್ರಯಾನ-2

ಈ ಸುದ್ದಿಯನ್ನು ಶೇರ್ ಮಾಡಿ

Chandrayan--02

ನವದೆಹಲಿ,ಡಿ.4-ಚಂದ್ರಯಾನ (2008ರ ಮೊದಲ)ದ 10 ವರ್ಷಗಳ ಬಳಿಕ ಇಸ್ರೋ ಚಂದ್ರಯಾನ-2 ಸಾಹಸಕ್ಕೆ ಕೈ ಹಾಕಿದ್ದು, 2018ರ ಮಾರ್ಚ್‍ನಲ್ಲಿ ಈ ಯೋಜನೆ ಆರಂಭವಾಗಲಿದೆ. ಚಂದ್ರಯಾನ ಯೋಜನೆಯ ಭಾಗವಾಗಿ ಚಂದ್ರನ ಮೇಲೆ ಮಾನವರಹಿತ ವಾಹನವನ್ನು ಇಸ್ರೋ ಇಳಿಸಲಿದ್ದು, ಚಂದ್ರನ ಮೇಲ್ಮೈನ್ನು ಮತ್ತಷ್ಟು ಹತ್ತಿರದಿಂದ ಸೂಕ್ಷ್ಮವಾಗಿ ಅಧ್ಯಯನ ನಡೆಸುವುದು ಈ ಯೋಜನೆಯ ಉದ್ದೇಶವಾಗಿದೆ.

ಇದರ ಭಾಗವಾಗಿ ಇಸ್ರೊ ಒಂದು ರೋವರï, ಒಂದು ಆರ್ಬಿಟರ್‍ಮತ್ತು ಇವೆರಡನ್ನೂ ಚಂದ್ರನ ಮೇಲೆ ಇಳಿಸಲು ನೆರವಾಗುವ ಲ್ಯಾಂಡರ್‍ನ್ನು ರಾಕೆಟ್ ಮೂಲಕ ಕಳುಹಿಸಲಿದೆ. ಎಲ್ಲವೂ ನಿರೀಕ್ಷಿತ ರೀತಿಯಲ್ಲಿ ನೆರವೇರಿದರೆ, 14 ಭೂದಿನಗಳಲ್ಲಿ ಈ ಯಾನ ಅಂತ್ಯಗೊಳ್ಳಲಿದೆ. ಸುಮಾರು 3290 ಕೆ.ಜಿ ತೂಕದ ರಾಕೆಟ್‍ಚಂದ್ರನತ್ತ ಹಾರಲಿದ್ದು, ಈ ಯೋಜನೆಗಾಗಿ ಇಸ್ರೊ ಸುಮಾರು 600 ಕೋಟಿ ರೂ. ವೆಚ್ಚ ಮಾಡುತ್ತಿದೆ.

Facebook Comments

Sri Raghav

Admin