ಒಖಿ ಎಫೆಕ್ಟ್’ನಿಂದ ಅಮಿತ್ ಶಾ ರ‍್ಯಾಲಿ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

Amit-Sha--02

ಸೂರತ್, ಡಿ.5- ಮುಂಬೈನ ನೈರುತ್ಯ ದಿಕ್ಕಿನಲ್ಲಿದ್ದ ಒಖಿ ಚಂಡಮಾರುತ ಈಗ ಈಶಾನ್ಯದತ್ತ ವೇಗವಾಗಿ ಚಲಿಸುತ್ತಿದ್ದು, ತೀವ್ರ ವಾಯುಭಾರ ಕುಸಿತದೊಂದಿಗೆ ಸೂರತ್ ಸೇರಿದಂತೆ ಗುಜರಾತ್‍ನ ದಕ್ಷಿಣ ಭಾಗದಲ್ಲಿ ಭಾರೀ ಗಾಳಿ-ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಹಮ್ಮಿಕೊಂಡಿದ್ದ ನಾಲ್ಕು ಚುನಾವಣಾ ರ್ಯಾಲಿಗಳು ರದ್ದಾಗಿವೆ. ರಾಜುಲಾ ಅಮರೇಲಿ, ಮೋವಾ ಮತ್ತು ಭಾವನಗರ್‍ಗಳಲ್ಲಿ ಇಂದು ಬಿಜೆಪಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ ಚಂಡಮಾರುತದಿಂದ ಮಳೆಯಾಗುತ್ತಿರುವುದರಿಂದ ಉದ್ದೇಶಿತ ರ್ಯಾಲಿಗಳು ರದ್ದಾಗಿವೆ.

Facebook Comments

Sri Raghav

Admin