ಡಿ.21ಕ್ಕೆ ಹೊರಬೀಳಲಿದೆ 2-ಜಿ ಹಗರಣ ಅಂತಿಮ ತೀರ್ಪು

ಈ ಸುದ್ದಿಯನ್ನು ಶೇರ್ ಮಾಡಿ

2g-Scam-01

ನವದೆಹಲಿ, ಡಿ.5-ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಹಾಗೂ ಡಿಎಂಕೆ ರಾಜ್ಯ ಸಭಾ ಸದಸ್ಯೆ ಕನಿಮೋಳಿ ಅವರ ವಿರುದ್ಧದ ಬಹುಕೋಟಿ ರೂ.ಗಳ 2-ಜಿ ಸ್ಪೆಕ್ಟ್ರಂ ಹಗರಣದ ಅಂತಿಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ  ಡಿ.21ಕ್ಕೆ ಪ್ರಕಟಿಸಲಿದೆ.ಈ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲ ಆರೋಪಿಗಳು ಮತ್ತು ಸಂಬಂಧಪಟ್ಟವರು ತಪ್ಪದೇ ಅದು ಹಾಜರಿರಬೇಕೆಂದು ನ್ಯಾಯಾಲಯ  ಇಂದು ಖಡಕ್ ಎಚ್ಚರಿಕೆ ನೀಡಿದೆ.

ಇದೇ ಪ್ರಕರಣದ ಸಂಬಂಧ ಪ್ರತ್ಯೇಕ ನ್ಯಾಯಾಲಯಗಳಲ್ಲಿ ಪ್ರತ್ಯೇಕ ಪ್ರಕರಣ ವಿಚಾರಣೆ ನಡೆಯುತ್ತಿದ್ದವು. ಒಂದು ಪ್ರಕರಣವನ್ನು ಸಿಬಿಐ ತನಿಖೆ ನಡೆಸಿತ್ತು. ಮತ್ತೊಂದು ಪ್ರಕರಣವನ್ನು ಜಾರಿ ನಿರ್ದೇಶನಾಲಯ ಮುಂದುವರಿಸಿತ್ತು.

Facebook Comments

Sri Raghav

Admin