ಪ್ರತಿಭಟನೆ ನಡೆಸುತ್ತಿದ್ದ ಯಶ್ವಂತ್ ಸಿನ್ಹಾ ಸೇರಿ 250 ರೈತರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Yashwant-Singh-----02

ವಿದರ್ಭ, ಡಿ.5- ಮಹಾರಾಷ್ಟ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕೃಷಿಕರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಧುರೀಣ ಹಾಗೂ ಕೇಂದ್ರದ ಮಾಜಿ ಸಚಿವ ಯಶ್ವಂತ್ ಸಿನ್ಹಾರನ್ನು ಪೊಲೀಸರು ಬಂಧಿಸಿದ ಘಟನೆ ನಿನ್ನೆ ಅಕೋಲಾದಲ್ಲಿ ನಿನ್ನೆ ರಾತ್ರಿ ನಡೆದಿದೆ. ವಿದರ್ಭ ಪ್ರಾಂತ್ಯದ ಸೋಯಾಬೀನ್ ಮತ್ತು ಹತ್ತಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆಯಲು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿನ್ಹಾ ನೇತೃತ್ವದಲ್ಲಿ ಸುಮಾರು 250 ಜನರು ಪ್ರತಿಭಟನೆ ನಡೆಸುತ್ತಿದ್ದರು.

ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ ರೈತರನ್ನು ಪೊಲೀಸರು ಬಂಧಿಸಿದರು. ಆದರೆ ಸಿನ್ಹಾರನ್ನು ಬಂಧಿಸದೇ ಅವರು ಹಿಂದಿರುಗುವಂತೆ ಪೊಲೀಸರು ತಿಳಿಸಿದರು. ಆದರೆ ಇದಕ್ಕೆ ಒಪ್ಪದ ಕೇಂದ್ರದ ಮಾಜಿ ಸಚಿವರು, ನಾನು ರೈತರ ಪರವಾಗಿ ಪ್ರತಿಭಟನೆ ನಡೆಸಲು ಬಂದಿದ್ದೇನೆ. ಅವರೊಂದಿಗೆ ನನ್ನನ್ನು ಬಂಧಿಸಲಿ ಎಂದು ಪಟ್ಟು ಹಿಡಿದರು. ನಂತರ ಎಲ್ಲರನ್ನು ಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಂತರ ಬಿಡುಗಡೆ ಮಾಡಿದರು.

Facebook Comments

Sri Raghav

Admin