ಬಾಬ್ರಿ ಮಸೀದಿ ದ್ವಾಂಸವಾಗಿ 25 ಇಂದಿಗೆ ವರ್ಷ, ಸುಪ್ರೀಂನಲ್ಲಿ ಅಯೋಧ್ಯೆ ವಿಚಾರಣೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Babri-Case

ನವದೆಹಲಿ, ಡಿ.5- ಉತ್ತರಪ್ರದೇಶದ ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿವಾದದ ಅಂತಿಮ ವಿಚಾರಣೆಯನ್ನು ಸುಪ್ರಿಂಕೋರ್ಟ್ ಇಂದಿನಿಂದ ಆರಂಭಸಿದ್ದು, ಹೊರಹೊಮ್ಮುವ ನ್ಯಾಯ ನಿರ್ಣಯದ ಬಗ್ಗೆ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ. ಬಾಬ್ರಿ ಮಸಿದಿ ಧ್ವಂಸ ಪ್ರಕರಣವು 25ನೇ ವರ್ಷಕ್ಕೆ ಒಂದು ದಿನ ಬಾಕಿ ಇರುವಂತೆಯೇ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿರುವುದು ಕಾಕತಾಳೀಯದೊಂದಿಗೆ ಆಸಕ್ತಿಯನ್ನೂ ಕೆರಳಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಅಬ್ದುಲ್ ನರ್ಜೀ ಅವರನ್ನು ಒಳಗೊಂಡ ವಿಶೇಷ ಪೀಠವು 2010ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಒಟ್ಟು 13 ಮೇಲ್ಮನವಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ಪ್ರಮುಖ ವಕೀಲರಾದ ಕೆ ಪರಸರನ್, ಸಿ.ಎಸ್.ವೈದ್ಯನಾಥ ಮತ್ತು ಸೌರಭ್ ಶಂಶೇರಿ ಅವರು ರಾಮಲಲ್ಲಾ  ಪರವಾಗಿ ವಾದ ಮಂಡನೆ ಮಾಡಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ. ಹಿರಿಯ ವಕೀಲರಾದ ಕಪಿಲ್ ಸಿಬಾಲ್, ಅನೂಪ್ ಚೌಧರಿ, ರಾಜೀವ್ ಧವನ್ ಮತ್ತು ಸುಶೀಲ್ ಜೈನ್ ಅವರು ಸುನ್ನಿ ವಕ್ಫ್ ಮಂಡಳಿ ಮತ್ತು ನಿರ್ಮೋಹಿ ಅಖಾಡ ಸೇರಿದಂತೆ ಇತರ ಪಕ್ಷಗಾರರ ಪರವಾಗಿ ವಾದ ಮಂಡಿಸಿದ್ದಾರೆ.

ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಅಯೋಧ್ಯೆಯಲ್ಲಿರುವ ವಿವಾದಿತ 2.77 ಎಕರೆ ಪ್ರದೇಶವನ್ನು ಮೂವರು ಪಕ್ಷಗಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ಮಧ್ಯೆ, ವಿವಾದಿತ ಸ್ಥಳದಿಂದ ಸ್ವಲ್ಪ ದೂರದಲ್ಲಿ, ಮುಸ್ಲಿಮರ ಜನಸಾಂದ್ರತೆ ಹೆಚ್ಚಾಗಿರುವ ಸ್ಥಳದಲ್ಲಿ ಮಸೀದಿ ನಿರ್ಮಾಣ ಮಾಡುವ ಮೂಲಕ ಈ ವಿವಾದ ಕೊನೆಗೊಳಿಸಬಹುದೆಂದು ಉತ್ತರ ಪ್ರದೇಶದ ಶಿಯಾ ಕೇಂದ್ರಿಯ ವಕ್ಫ್ ಮಂಡಳಿಯ ನೇತೃತ್ವದಲ್ಲಿ ಕೆಲ ಮುಸ್ಲಿಮರು ನ್ಯಾಯಾಲಯಕ್ಕೆ ಸಲಹೆ ನೀಡಿದ್ದರು. ಆದರೆ, ಈ ಪ್ರಕರಣದಲ್ಲಿ ಶಿಯಾ ಪಂಗಡದ ಮಧ್ಯ ಪ್ರವೇಶಕ್ಕೆ ಅಖಿಲ ಭಾರತ ಸುನ್ನಿ ವಕ್ಫ್ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

1992ರ ಡಿ.6ರಂದು ಧ್ವಂಸಗೊಂಡ ಮಸೀದಿಯು ಸುನ್ನಿ ಪಂಗಡಕ್ಕೆ ಸೇರಿದ್ದೆಂದು 1946ರಲ್ಲೇ ತೀರ್ಮಾನವಾಗಿದೆ. ಹಾಗಾಗಿ ಇದರಲ್ಲಿ ಶಿಯಾಗಳು ಮಧ್ಯಪ್ರವೇಶ ಮಾಡಬಾರದೆಂದು ಸುನ್ನಿ ವಕ್ಫ್ ಮಂಡಳಿ ಸೂಚಿಸಿತ್ತು. ಇತ್ತೀಚೆಗಷ್ಟೆ ಈ ಬಗ್ಗೆ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದ ಕೆಲ ನಾಗರಿಕ ಹಕ್ಕುಗಳ ಹೋರಾಟಗಾರರು, ಅಯೋಧ್ಯೆ ವಿವಾದವನ್ನು ಕೇವಲ ಆಸ್ತಿ ವಿವಾದ ಎಂದು ಪರಿಗಣಿಸಬಾರದು, ರಾಷ್ಟ್ರದ ಜಾತ್ಯತೀತ ರಚನೆಯ ಮೇಲೆ ಸುದೀರ್ಘ ಪ್ರಭಾವ ಬೀರುವ ಗಂಭೀರ ವಿಚಾರವಾಗಿ ಗಣನೆಗೆ ತೆಗೆದುಕೊಳ್ಳಬೇಕು ಹಾಗೂ ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡಬೇಕೆಂದು ಮನವಿ ಮಾಡಿz್ದÁರೆ.
ಈ ಮುನ್ನ ಸುಪ್ರಿಂಕೋರ್ಟ್ ನೀಡಿದ್ದ ನಿರ್ದೇಶನದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಸಂಬಂಧಪಟ್ಟ ದಾಖಲೆಗಳ ಇಂಗ್ಲೀಷ್ ಅನುವಾದ ಪ್ರತಿಗಳನ್ನು ಕೋರ್ಟ್‍ಗೆ ಸಲ್ಲಿಸಿದೆ.

ಆಯೋಧ್ಯೆಯಲ್ಲಿ ಬಿಗಿ ಭದ್ರತೆ : ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ನಾಳೆಗೆ 25ನೇ ವರ್ಷ ತುಂಬುವ ಹಿನ್ನೆಲೆಯಲ್ಲಿ ಅಯೋಧ್ಯೆ ಸೇರಿದಂತೆ ಉತ್ತರ ಪ್ರದೇಶ ಹಾಗೂ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin