ಶಶಿ ನನ್ನ ಜೊತೆಗಿದ್ದರೆ ಸಿನಿಮಾ ಯಶಸ್ಸಿನ ಬಗ್ಗೆ ಅನುಮಾನವೇ ಇರುತ್ತಿರಲಿಲ್ಲ : ಬಿಗ್ ಬಿ ಕಂಬನಿ

ಈ ಸುದ್ದಿಯನ್ನು ಶೇರ್ ಮಾಡಿ

Shashi--02

ಮುಂಬೈ, ಡಿ.5-ನಾವು ಸಿನಿಮಾದಲ್ಲಿ ಅಣ್ಣತಮ್ಮಂದಿರಂತೆ ಒಟ್ಟಿಗೆ ನಟಿಸಿದೇವು..ತೆರೆ ಮೇಲೆ ಅಪರಾಧ ಕೃತ್ಯಗಳಲ್ಲಿ ಪಾಲುದಾರರಾದೆವು.. ಶಶಿ ನನ್ನ ಜೊತೆ ಇದ್ದರೆ ನನಗೆ ಸಿನಿಮಾ ಯಶಸ್ಸಿನ ಬಗ್ಗೆ ಅನುಮಾನವೇ ಇರುತ್ತಿರಲಿಲ್ಲ. ಅಂಥ ಅತ್ಯಂತ ಸ್ಪುರದ್ರೂಪಿ ಮತ್ತು ಅಗಾಧ ಪ್ರತಿಭೆಯ ಧೀಮಂತ ನಟನನ್ನು ಕಳೆದುಕೊಂಡು ಹೃದಯ ಭಾರವಾಗಿದೆ… ನಿನ್ನೆ ನಿಧನರಾದ ಹಿರಿಯ ಅಭಿನೇತ ಶಶಿಕಪೂರ್ ನಿಧನಕ್ಕೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ತಮ್ಮ ವೈಯಕ್ತಿಕ ಬ್ಲಾಗ್‍ನಲ್ಲಿ ಅಗಲಿಕೆಯ ನೋವನ್ನು ತೋಡಿಕೊಂಡಿದ್ದಾರೆ.

ಶಶಿ ಮತ್ತು ಬಚ್ಚನ್ 14 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಬಾಂಬೆ ಟಾಕೀ, ರೋಟಿ ಕಪಡ ಔರ್ ಮಕಾನ್, ದೀವಾರ್, ಜÁನೇಮನ್, ಕಭೀ ಕಭೀ, ಇಮಾನ್ ಧರಂ, ಕಾಲಾಪತ್ಥರ್, ತ್ರಿಶೂಲ್, ಸುಹಾಗ್, ದೋ ಔರ್ ದೋ ಪಾಂಚ್, ಶಾನ್, ನಮಕ್ ಹಲಾಲ್, ಅಖೇಲಾ ಈ ಎಲ್ಲ ಸಿನಿಮಾಗಳು ಸೂಪರ್‍ಹಿಟ್ ಆಗಿ ಈ ಇಬ್ಬರು ಸ್ಟಾರ್‍ಗಿರಿಯನ್ನು ಭದ್ರಗೊಳಿಸಿದ್ದವು. ಬಚ್ಚನ್ ಮೇಲಿನ ಪ್ರೀತಿ-ಅಭಿಮಾನಕ್ಕಾಗಿ ಶಶಿ 1991ರಲ್ಲಿ ಬಚ್ಚನ್ ಅಭಿನಯದ ಅಜೂಬಾ ಸಿನಿಮಾ ನಿರ್ದೇಶಿಸಿದ್ದರು. ತಾವು ಒಟ್ಟಿಗೆ ನಟಿಸಿದ ಸಿನಿಮಾಗಳು ಮತ್ತು ಆ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸಂಗತಿಗಳನ್ನು ಬಚ್ಚನ್ ಹಂಚಿಕೊಂಡು ದುಃಖತಪ್ತರಾಗಿದ್ದಾರೆ.

Facebook Comments

Sri Raghav

Admin