ಶಿವಗಂಗಾ ಹೊನ್ನಾದೇವಿ ಹುಂಡಿಯಲ್ಲಿ 8.84ಲಕ್ಷ ಹಣ ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

daba-1

ದಾಬಸ್‍ಪೇಟೆ, ಡಿ.5- ದಕ್ಷಿಣ ಕಾಶಿ ಶಿವಗಂಗಾ ಕ್ಷೇತ್ರದ ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಈ ಬಾರಿ 8.84ಲಕ್ಷ ರೂ. ಹಣ ಸಂಗ್ರಹವಾಗಿದೆ. ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರಾದ ಪದ್ಮಾ, ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಕುಮಾರಸ್ವಾಮಿ ಸಮ್ಮುಖದಲ್ಲಿ ಹುಂಡಿಯಲ್ಲಿದ್ದ ಹಣ ಎಣಿಕೆ ಕಾರ್ಯ ನಡೆಯಿತು.

ಈ ಬಾರಿ ಹುಂಡಿ ಎಣಿಕೆಯಲ್ಲಿ 8,84,707 ರೂ.ಗಳು ಸಂಗ್ರಹವಾಗಿದ್ದು, ಅಮಾನೀಕರಣದ ಹಳೆ ನೋಟುಗಳಾದ ಒಂದು ಸಾವಿರದ 1 ನೋಟು ಮತ್ತು ಐದುನೂರು ರೂ.ಗಳ 4 ನೋಟುಗಳು ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ದೇವಾಲಯ ವ್ಯವಸ್ಥಾಪಕ ಅಧ್ಯಕ್ಷರಾದ ಮಂಗಳಾ ಸುರೇಶ್, ಸದಸ್ಯರಾದ ಎಸ್.ಟಿ.ಸಿದ್ದರಾಜು, ಸಿದ್ದಗಂಗಮ್ಮತಮ್ಮಯ್ಯ, ರಾಜಣ್ಣ, ರೇಣುಕೇಶ, ಹನುಮಂತರಾಜು, ಗ್ರಾಮಲೆಕ್ಕಿಗ ಬಾಲಚಂದ್ರ, ಪಾರುಪತ್ತೇದಾರ್ ಶ್ರೀನಿವಾಸ್, ಸಿಬ್ಬಂದಿಗಳಾದ ಸಿದ್ದಪ್ಪ, ರಮೇಶ್ ಹಾಗೂ ಐವತ್ತಕ್ಕೂ ಹೆಚ್ಚು ಮಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Facebook Comments