ಸಿದ್ದರಾಮಯ್ಯನವರ ಜನಾಶೀರ್ವಾದ ಯಾತ್ರೆ ಮಾರ್ಚ್‍ಗೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha--01

ಬೆಂಗಳೂರು, ಡಿ.5- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಾಶೀರ್ವಾದ ಯಾತ್ರೆ ಮಾರ್ಚ್‍ಗೆ ಮುಂದೂಡಿಕೆಯಾಗಿದೆ. ಉದ್ದೇಶಿತ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದ ಯಾತ್ರೆ ಡಿ.13ರಿಂದ ಪ್ರಾರಂಭವಾಗುವ ಒಂದು ತಿಂಗಳ ಪ್ರವಾಸ ಎಂದಿನಂತೆ ನಡೆಯಲಿದೆ. ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನ ಶಂಕುಸ್ಥಾಪನೆ ಉದ್ಘಾಟನೆ ನೆಪದಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಆರಂಭದಲ್ಲೇ ಅಪಸ್ವರ ಕೇಳಿ ಬಂದಿತ್ತು.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಿಎಂ ನಡುವೆ ಯಾತ್ರೆ ಸಂಬಂಧ ಭಿನ್ನಾಭಿಪ್ರಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಜನಾಶೀರ್ವಾದ ಯಾತ್ರೆಯನ್ನು ಮಾರ್ಚ್‍ಗೆ ಮುಂದೂಡಲಾಗಿದೆ. ಸದ್ಯ ಈಗ ನಿಗದಿಯಂತೆ ಮುಖ್ಯಮಂತ್ರಿಗಳು ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದ ಒಂದು ತಿಂಗಳ ಪ್ರವಾಸವನ್ನು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನಡೆಸಲಿದ್ದಾರೆ. ಡಿ.13ರಿಂದ ಈ ಪ್ರವಾಸ ಪ್ರಾರಂಭವಾಗಲಿದೆ. ಮುಖ್ಯಮಂತ್ರಿಗಳು ಕೈಗೊಂಡಿದ್ದ ಜನಾಶೀರ್ವಾದ ಯಾತ್ರೆ ಏಕಪಕ್ಷೀಯವಾಗಿದೆ ಎಂದು ಪರಮೇಶ್ವರ್ ಹೈಕಮಾಂಡ್ ಗಮನಕ್ಕೆ ತಂದಿದ್ದು, ಈ ಬಗ್ಗೆ ಹೈಕಮಾಂಡ್ ಪಕ್ಷದಲ್ಲಿ ಯಾವುದೇ ಭಿನ್ನಭಿಪ್ರಾಯ ತಲೆದೋರಬಾರದು ಎಂಬ ನಿಟ್ಟಿನಲ್ಲಿ ಒಟ್ಟಾಗಿ ಹೋಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.

ಪಕ್ಷ ಮತ್ತು ಸರ್ಕಾರ ಜತೆ ಜತೆಯಾಗಿ ಹೋಗಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸನ್ನಿವೇಶ ರಾಜ್ಯದಲ್ಲಿ ಇರುವ ಹಿನ್ನೆಲೆಯಲ್ಲಿ ಎಲ್ಲರೂ ಒಟ್ಟಾಗಿ ಹೋಗಬೇಕು ಎಂಬ ಸೂಚನೆಯನ್ನು ನೀಡಿದೆ.  ಇದಲ್ಲದೆ ಪಕ್ಷದ ಉಸ್ತುವಾರಿ ಆಗಿರುವ ವೇಣುಗೋಪಾಲ್ ಅವರು ಕೂಡ ಹೊಸ ಸೂತ್ರವೊಂದನ್ನು ರೂಪಿಸಿದ್ದಾರೆ. ಮುಖ್ಯಮಂತ್ರಿಗಳ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದ ನೆಪದಲ್ಲಿ ಸಮಾವೇಶ, ಸಮಾರಂಭಗಳ ಮೂಲಕ ಪಕ್ಷ ಸಂಘಟನೆ ಮಾಡುವುದು ಪಕ್ಷದ ವತಿಯಿಂದ ವಿಭಾಗೀಯ ಮಟ್ಟದಲ್ಲಿ ಸಮಾವೇಶಗಳನ್ನು, ರ್ಯಾಲಿಗಳನ್ನು ಮಾಡುವ ಮೂಲಕ ಪಕ್ಷವನ್ನು ಬಲವರ್ಧನೆ ಮಾಡುವ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಮಾರ್ಚ್ ತಿಂಗಳಲ್ಲಿ ಒಟ್ಟಾಗಿ ಜನಾಶೀರ್ವಾದ ಯಾತ್ರೆ ಮಾಡಲು ನಿರ್ಧರಿಸಿದ್ದಾರೆ.

Facebook Comments

Sri Raghav

Admin