5,000 ಫ್ಲಾಟ್‍ಗಳ ವಂಚನೆ ಆರೋಪದಲ್ಲಿ 8 ಬಿಲ್ಡರ್‍ಗಳ ಬಂಧನಕ್ಕೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Job--1

ನೋಯ್ಡಾ, ಡಿ.5-ಗೃಹ ಖರೀದಿದಾರರಿಗೆ ಕೋಟ್ಯಂತರ ರೂ.ಗಳ ಮೌಲ್ಯದ 5,000 ಫ್ಲಾಟ್‍ಗಳನ್ನು ವಿತರಿಸಲು ವಿಫಲವಾಗಿರುವ ನೋಯ್ಡಾದ ಎಂಟು ಪ್ರಭಾವಿ ಬಿಲ್ಟರ್‍ಗಳ (ಕಟ್ಟಡ ನಿರ್ಮಾತೃಗಳು) ಬಂಧನಕ್ಕೆ ಉತ್ತರಪ್ರದೇಶ ಸರ್ಕಾರದ ಸಚಿವರ ಸಮಿತಿ ಆದೇಶ ನೀಡಿದ್ದು, ಯಾವುದೇ ಕ್ಷಣದಲ್ಲಿ ಮಹಾ ವಂಚಕರು ಅರೆಸ್ಟ್ ಆಗುವ ಸಾಧ್ಯತೆ ಇದೆ.  ಅತಿ ದೊಡ್ಡ ಅಕ್ರಮ-ಅವ್ಯವಹಾರಗಳು ನೋಯ್ಡಾದಲ್ಲಿ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಲು ಸಚಿವರ ಸಮೂಹದ ಸಮಿತಿಯೊಂದನ್ನು ಗುಜರಾತ್ ಸರ್ಕಾರ ರಚಿಸಿತ್ತು. ಈ ಹಗರಣದಲ್ಲಿ ಭಾರೀ ವಂಚನೆ ನಡೆದ ಹಿನ್ನೆಲೆಯಲ್ಲಿ ಎಂಟು ಬಿಲ್ಡರ್‍ಗಳನ್ನು ಬಂಧಿಸುವಂತೆ ಗೌತಮ್ ಬುದ್ಧ ನಗರದ ಪೊಲೀಸ್ ವರಿಷ್ಠಾಧಿಕಾರಿ ಲವ ಕುಮಾರ್ ಅವರಿಗೆ ಆದೇಶ ನೀಡಲಾಗಿದೆ. ಮುಂದಿನ ತನಿಖೆಗೆ ತೊಡಕಾಗುವ ಸಾಧ್ಯತೆ ಇರುವ ಕಾರಣ ಈ ಪ್ರಭಾವಿಗಳ ಹೆಸರನ್ನು ಅಧಿಕಾರಿಗಳು ಬಹಿರಂಗಗೊಳಿಸಿಲ್ಲ.

ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಈ ಯೋಜನೆಗಳಲ್ಲಿ ನಡೆದ ದೊಡ್ಡ ಹಗರಣಗಳ ಸಂಬಂಧ ಕಳೆದ ಸೆಪ್ಟೆಂಬರ್‍ನಲ್ಲಿ ಆರು ಪ್ರಮುಖ ಬಿಲ್ಡರ್‍ಗಳ ವಿರುದ್ಧ ಪೊಲೀಸರು ಎಫ್‍ಐಆರ್‍ಗಳನ್ನು ದಾಖಲಿಸಿಕೊಂಡಿದ್ದರು. ಅಮ್ರಾಪಾಲಿ, ಸೂಪರ್‍ಟೆಕ್, ಅಲ್‍ಪೈನ್ ರಿಯಲ್‍ಟೆಕ್, ಪ್ರೋವ್ಯೂ ಗ್ರೂಪ್, ಟುಡೇ ಹೋಮ್ಸ್ ಮತ್ತು ಜೆಎನ್‍ಸಿ ಕನಸ್ಟ್ರಕ್ಷನ್ ಸಂಸ್ಥೆಗಳ ವಿರುದ್ಧ ವಿವಿಧ ಪ್ರಕರಣಗಳ ಸಂಬಂಧ ಆರೋಪ ಪಟ್ಟಿಗಳು ದಾಖಲಾಗಿದ್ದವು.  ಗ್ರಾಹಕರಿಗೆ 5,000 ಫ್ಲಾಟ್‍ಗಳನ್ನು ಸ್ವಾಧೀನಕ್ಕೆ ಹಸ್ತಾಂತರಿಸುವಲ್ಲಿ ವಿಫಲರಾದ ಎಲ್ಲ ಎಂಟು ಬಿಲ್ಡರ್‍ಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಅವರನ್ನು ಬಂಧಿಸುವಂತೆ ನಗರ ವಸತಿ ಸಚಿವ ಸುರೇಶ್ ಖನ್ನಾ ಅವರನ್ನು ಒಳಗೊಂಡ ಮೂವರು ಸಚಿವರ ಸಮಿತಿ ತಿಳಿಸಿದೆ.

ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಯಮುನಾ ಎಕ್ಸ್‍ಪ್ರೆಸ್ ವೇ ಪ್ರದೇಶಗಳಲ್ಲಿ 50,000 ಫ್ಲಾಟ್‍ಗಳನ್ನು ನಿರ್ಮಿಸಿ ಡಿಸೆಂಬರ್ ಅಂತ್ಯದೊಳಗೆ ವಿತರಿಸಬೇಕೆಂದು ಕಳೆದ ಆಗಸ್ಟ್‍ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಗುರಿಯನ್ನು ನಿಗದಿಗೊಳಿಸಿದ್ದರು. ಆದರೆ ಈ ಗಡುವಿನಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರದ ಹಿನ್ನೆಲೆಯಲ್ಲಿ ಹಾಗೂ 5,000 ಫ್ಲಾಟ್‍ಗಳನ್ನು ಗೃಹ ಖರೀದಿದಾರರಿಗೆ ನೀಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

Facebook Comments

Sri Raghav

Admin