ಅನಿಲ ಭಾಗ್ಯ ಯೋಜನೆ ಜಾರಿಯಾಗದಂತೆ ಕೇಂದ್ರದ ಮೇಲೆ ಪ್ರಭಾವಿಗಳ ಒತ್ತಡ

ಈ ಸುದ್ದಿಯನ್ನು ಶೇರ್ ಮಾಡಿ

UT-Khadara

ಬೆಂಗಳೂರು,ಡಿ.6- ಬಡವರಿಗೆ ಗ್ಯಾಸ್ ಒದಗಿಸುವ ರಾಜ್ಯ ಸರ್ಕಾರದ ಅನಿಲ ಭಾಗ್ಯ ಯೋಜನೆ ಜಾರಿಯಾಗದಂತೆ ಪ್ರಭಾವಿಗಳು ಕೇಂದ್ರದ ಮೇಲೆ ಒತ್ತಡ ಹೇರಿರುವ ಕುರಿತು ಆಹಾರ ಇಲಾಖೆ ಸಚಿವ ಯು.ಟಿ. ಖಾದರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿ ನಂತರ ಕೇಂದ್ರದ ಸಹಕಾರದೊಂದಿಗೆ ಮುಂದುವರಿಯಲು ಸಚಿವರು ನಿರ್ಧರಿಸಿದ್ದಾರಂತೆ. ಅಲ್ಲದೆ, ರಾಜ್ಯ-ಕೇಂದ್ರದ ನಡುವಣ ಸಂಘರ್ಷದಿಂದ ಜನರಿಗೆ ಸಿಗುವ ಸವಲತ್ತು ಮೊಟಕಾಗಬಾರದು ಎಂದು ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಅನಿಲ ಭಾಗ್ಯ ಯೋಜನೆಯ ಜಾರಿ ವಿಷಯದಲ್ಲಿ ಕೇಂದ್ರ ಸರ್ಕಾರ ಕೆಲ ಷರತ್ತುಗಳನ್ನು ಹಾಕಿದೆ. ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಎರಡನೇ ರಿಫಿಲï ನೀಡಬಾರದು. ಹೆಚ್ಚು ರಿಫಿಲ್ ಪೂರೈಸಲು ನಮಗೆ ಸಾಧ್ಯವಿಲ್ಲವೆಂದು ಕೇಂದ್ರ ಹೇಳಿದೆ. ಯೋಜನೆಗೆ ಕೇಂದ್ರದ ಹೆಸರನ್ನೂ ಸೇರಿಸಬೇಕು ಎಂದು ಷರತ್ತು ಹಾಕಿದೆ ಎಂದು ಸಚಿವ ಖಾದರ್ ಹೇಳಿದ್ದಾರೆ.

ಈ ಮಧ್ಯೆ ರಾಜ್ಯದಲ್ಲಿ ಕೇಂದ್ರದ ಯೋಜನೆಯಡಿ ಗ್ಯಾಸ್ ಸೌಲಭ್ಯ ಪಡೆಯುವವರ ಅಂಕಿ-ಅಂಶ ನಮಗೆ ಬೇಕೇ ಬೇಕು. ಇಲ್ಲದಿದ್ದರೆ ಯೋಜನೆಯ ದುರುಪಯೋಗವಾಗುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಈ ವಿಷಯದಲ್ಲಿ ಅಸಹಕಾರ ತೋರಿದರೆ ನಾವು ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಕೇಂದ್ರದ ಷರತ್ತುಗಳ ಕುರಿತು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಅನಿಲ ಭಾಗ್ಯ ಯೋಜನೆಯ ಜಾರಿ ವಿಷಯದಲ್ಲಿ ಎದ್ದಿರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುತ್ತೇವೆ. ಹೀಗಾಗಿಯೇ ಜನರಿಗಾಗಿ ನಿಲುವಿನಲ್ಲಿ ಅಗತ್ಯ ಮಾರ್ಪಾಟು ಮಾಡಿಕೊಂಡು ಕೇಂದ್ರದೊಂದಿಗೆ ಸಹಕಾರ ಮನೋಭಾವದಿಂದ ಮುಂದುವರಿಯಲು ನಿರ್ಧರಿಸಲಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಯೋಜನೆಯನ್ನು ಜಾರಿಗೊಳಿಸಿದರೆ ರಾಜ್ಯ ಸರ್ಕಾರಕ್ಕೆ ಹೆಸರು ಬರುತ್ತದೆ. ಹೀಗಾಗಿ ಅದನ್ನು ಜಾರಿಗೊಳಿಸಲು ಬಿಡಬೇಡಿ ಎಂದು ಕೇಂದ್ರದ ಮೇಲೆ ಒತ್ತಡ ಹೇರಿರುವ ಶಂಕೆ ಕಾಡುತ್ತಿದೆ ಎಂದ ಖಾದರ್, ಸದ್ಯದಲ್ಲೇ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ಅವರು ಹೇಳಿದ್ದಾರೆ.

Facebook Comments

Sri Raghav

Admin