ಐಪಿಎಲ್ ಗೆ ಮರಳಿದ ಸಿಎಸ್‍ಕೆ, ರಾಜಸ್ತಾನ್ ರಾಯಲ್ಸ್ : ಸೂಪರ್ ಕಿಂಗ್ಸ್’ಗೆ ಧೋನಿ ನಾಯಕ

ಈ ಸುದ್ದಿಯನ್ನು ಶೇರ್ ಮಾಡಿ

CSK--02

ನವದೆಹಲಿ, ಡಿ.6- ಐಪಿಎಲ್ 11ರ ಆವೃತ್ತಿಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯಲ್ಲಿ ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಐಪಿಎಲ್ 11ರಲ್ಲಿ ಎಷ್ಟು ಆಟಗಾರರನ್ನು ಪುನರಾವರ್ತನೆ ಮಾಡಿಕೊಳ್ಳಬೇಕೆಂಬುದರ ಬಗ್ಗೆಯೂ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು ಪ್ರತಿ ತಂಡದ ಫ್ರಾಂಚೈಸಿಗಳು ಮೂವರು ಸ್ವದೇಶಿ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ರೀಟೇನ್ ಮಾಡಿಕೊಳ್ಳುವ ಅವಕಾಶವನ್ನು ನೀಡಿದ್ದಾರೆ.

ಸಿಎಸ್‍ಕೆಗೆ ಧೋನಿಯೇ ನಾಯಕ:

ಐಪಿಎಲ್‍ನಲ್ಲಿ ಇಂದಿಗೂ ನಂಬರ್ 1 ನಾಯಕನೆಂದೇ ಬಿಂಬಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿಯೇ ಐಪಿಎಲ್11ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳುವವರು ಎಂಬುದನ್ನು ಸಿಎಸ್‍ಕೆ ಫ್ರಾಂಚೈಸಿಗಳು ತಿಳಿಸಿದ್ದಾರೆ. 2013ರ ಸ್ಪಾಟ್ ಫಿಕ್ಸಿಂಗ್‍ನಿಂದಾಗಿ ಕಳೆದ 2 ಎರಡು ಋತುಗಳಿಂದಲೂ ಹೊರಗುಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ 2018ರ ಐಪಿಎಲ್‍ನಲ್ಲಿ ಪಾಲ್ಗೊಳ್ಳುವುದರಿಂದ ಪುಣೆ ಹಾಗೂ ಗುಜರಾತ್ ತಂಡಗಳನ್ನು ಕೈ ಬಿಡಲಾಗಿದೆ ಎಂದು ಐಪಿಎಲ್ ಮುಖ್ಯಸ್ಥರು ತಿಳಿಸಿದ್ದಾರೆ.

ಐಪಿಎಲ್ 11ರಲ್ಲಿ ಪಾಲ್ಗೊಳ್ಳುವ 8 ತಂಡಗಳ ಫ್ರಾಂಚೈಸಿಗಳು ಪ್ರತಿ ತಂಡಗಳಲ್ಲೂ 25 ಆಟಗಾರರನ್ನು ಖರೀದಿಸುವ ಅವಕಾಶವಿದ್ದು , ಅದಕ್ಕಾಗಿ 2018ಕ್ಕೆ ಸಂಬಂಧಿಸಿದಂತೆ 80 ಕೋಟಿ, 2019ರ ಬಿಕರಿಗೆ 82 ಕೋಟಿ ಹಾಗೂ 2020 ಆವೃತ್ತಿಗೆ 85 ಕೋಟಿಗಳನ್ನು ವಿನಿಯೋಗಿಸಬಹುದು ಎಂಬ ತೀರ್ಮಾನವು ಹೊರ ಬಿದ್ದಿದೆ. ಮೂಲಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡ್ವೇನ್ ಬ್ರಾವೋ, ಮಹೇಂದ್ರ ಸಿಂಗ್ ಧೋನಿ, ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ, ಕೀರನ್ ಪೋಲಾರ್ಡ್, ಜಸ್‍ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯಾ, ಕುನಾಲ್ ಪಾಂಡ್ಯ, ರಾಯಲ್ ಚಾರ್ಲೆಂಜರ್ಸ್ ಬೆಂಗಳೂರು ವಿರಾಟ್, ಎಬಿ ಡಿವಿಲಯರ್ಸ್, ಕ್ರೀಸ್ ಗೇಲ್, ಸನ್‍ರೈಸರ್ಸ್ ಹೈದ್ರಾಬಾದ್ ತಂಡವು ಡೇವಿಡ್ ವಾರ್ನರ್ ಹಾಗೂ ಭುವನೇಶ್ವರ್‍ಕುಮಾರ್‍ರನ್ನು ಉಳಿಸಿಕೊಳ್ಳಲು ಇಚ್ಚಿಸಿದೆ.

Facebook Comments

Sri Raghav

Admin