ಕರ್ನಾಟಕದ ಯೋಧನನ್ನು ಬಲಿ ಪಡೆದ ನಕ್ಸಲರೂ ಸೇರಿ 7 ಮಂದಿ ಬಂಡುಕೋರರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Naxal--02

ಗಡ್‍ಚಿರೋಲಿ(ಛತ್ತೀಸ್‍ಗಢ),ಡಿ.6-ಸಿಆರ್‍ಪಿಎಫ್ ಯೋಧ ಕನ್ನಡಿಗ ಮಂಜುನಾಥ ಶಿವಲಿಂಗಪ್ಪ ಜಕ್ಕಣ್ಣನವರ್ ಅವರನ್ನು ಬಲಿ ಪಡೆದಿದ್ದ ನಕ್ಸಲರೂ ಸೇರಿದಂತೆ ಏಳು ಮಾವೋವಾದಿ ಬಂಡುಕೋರರನ್ನು ಮಹಾರಾಷ್ಟ್ರ-ಛತ್ತೀಸ್‍ಗಢ ಗಡಿಯಲ್ಲಿರುವ ಗಡಚಿರೋಲಿಯಲ್ಲಿ ಪೊಲೀಸರು ಇಂದು ಮುಂಜಾನೆ ಹೊಡೆದುರುಳಿಸಿದ್ದಾರೆ.  ಗಡ್‍ಚಿರೋಲಿಯ ಶಿರೋಂಚ ತಹಸೀಲ್‍ನ ಜಿಂಗನೂರು ಔಟ್‍ಪೊೀಸ್ಟ್‍ನಿಂದ 15 ಕಿ.ಮೀ ದೂರದಲ್ಲಿರುವ ಕಲ್ಲೇಡ್ ಗ್ರಾಮದಲ್ಲಿ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ಇಂದು ಬೆಳಗ್ಗೆ 6 ಗಂಟೆಯಲ್ಲಿ ಗುಂಡಿನ ಚಕಮಕಿ ನಡೆದಿದೆ.

ಈ ವೇಳೆ ಐವರು ಮಹಿಳೆಯರು ಸೇರಿದಂತೆ 7 ಮಂದಿ ನಕ್ಸಲರು ಹತರಾಗಿದ್ದು , ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇಂದು ನಸುಕಿನಿಂದ ಕಲ್ಲೇಡ್ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲರು ಕಾಣಿಸಿಕೊಂಡು ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆಯಿತು. ಈ ಗುಂಡಿನ ಚಕಮಕಿ ವೇಳೆ ಪೊಲೀಸರಿಗೂ ಗಾಯಗಳಾಗಿವೆ.

ಈ ವೇಳೆ ಪೊಲೀಸರು ನಕ್ಸಲ್ ಗುಂಪಿನ 7 ಮಂದಿ ಪ್ರಮುಖರನ್ನು ಹೊಡೆದುರುಳಿಸಿದ್ದಾರೆ. ಹತರಾದವರಲ್ಲಿ ಐವರು ಮಹಿಳೆಯರು ಸೇರಿದ್ದಾರೆ ಎಂದು ಉನ್ನತಾಧಿಕಾರಿ ಮಾಹಿತಿ ನೀಡಿದ್ದಾರೆ. ಕಳೆದ ವಾರ ಗಡ್‍ಚಿರೋಲಿಯ ಇದೇ ಪ್ರದೇಶದ ಸಮೀಪ ನಕ್ಸಲರು ನಡೆಸಿದ ದಾಳಿಯಲ್ಲಿ ಧಾರವಾಡ ತಾಲ್ಲೂಕು ಮನಗುಂಡಿ ಗ್ರಾಮದ ಸಿಆರ್‍ಪಿಎಫ್ ಯೋಧ ಮಂಜುನಾಥ ಶಿವಲಿಂಗಪ್ಪ ಚಕ್ಕಣ್ಣನವರ್ ಹುತಾತ್ಮರಾಗಿ, ಇತರ ಯೋಧರು ಗಾಯಗೊಂಡಿದ್ದರು.
ಮಾವೋವಾದಿ ಬಂಡುಕೋರರು ಡಿ.2 ರಿಂದ ಆಯೋಜಿಸಿರುವ ಜನ ವಿಮೋಚನಾ ಸಮೂಹ(ಪಿಎಲïಜಿ) ಸಪ್ತಾಹ ಡಿ.8ರವರೆಗೂ ನಡೆಯಲಿದೆ. ಇದರಲ್ಲಿ ದೇಶದ ನಕ್ಸಲï ಗುಂಪಿನ ದೊಡ್ಡ ದೊಡ್ಡ ನಾಯಕರು ಸಹ ಪಾಲ್ಗೊಂಡಿದ್ದರು. ಈ ವೇಳೆ ನಕ್ಸಲï ಚಟುವಟಿಕೆಗಳ ಮೇಲೆ ಪೊಲೀಸರು ಸಹ ನಿಗಾ ವಹಿಸಿದ್ದರು.
ನಕ್ಸಲರ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಯೋಧರು ಜಂಟಿ ಕಾರ್ಯಾಚರಣೆ ನಡೆಸಿ ಏಳು ಮಾವೋವಾದಿಗಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

Facebook Comments

Sri Raghav

Admin