ಕಾರಿನಲ್ಲಿ ಶವವಾಗಿ ಪತ್ತೆಯಾದ ಹಾಕಿ ಆಟಗಾರ, ಹಣೆಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Hocky--02

ನವದೆಹಲಿ, ಡಿ.6-ದೆಹಲಿ ಅತ್ಯಾಚಾರ ಮತ್ತು ಕಗ್ಗೊಲೆಗಳ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿರುವಾಗಲೇ, ದಕ್ಷಿಣ ದಿಲ್ಲಿಯಲ್ಲಿ ರಾಷ್ಟ್ರೀಯ ಹಾಕಿ ಆಟಗಾರ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನ ವಿದ್ಯಾರ್ಥಿಯ ಶವ ಕಾರಿನಲ್ಲಿ ಪತ್ತೆಯಾಗಿದೆ. ಹಣೆಗೆ ಗುಂಡೇಟು ತಗುಲಿದ್ದು, ಇದು ಕೊಲೆಯೋ ಅಥವಾ ಅತ್ಮಹತ್ಯೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಪಶ್ಚಿಮ ದೆಹಲಿಯ ಸುಭಾಷ್‍ನಗರದ ನಿವಾಸಿ ರಿಜ್ವಾನ್ ಖಾನ್(22) ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾನೆ. ಪ್ರತಿಭಾವಂತ ಹಾಕಿ ಆಟಗಾರನಾಗಿದ್ದ ಖಾನ್ ಜಾಮಿಯಾ ವಿಶ್ವವಿದ್ಯಾಲಯದ ಎರಡನೇ ವರ್ಷದ ಕಲಾ ವಿಭಾಗದ ವಿದ್ಯಾರ್ಥಿ. ದಕ್ಷಿಣ ದೆಹಲಿಯಲ್ಲಿ ಸರೋಜಿನಿ ನಗರದಲ್ಲಿನ ತನ್ನ ಗೆಳತಿ ಮನೆ ಸನಿಹ ಪಾರ್ಕ್ ಮಾಡಿದ್ದ ಕಾರಿನಲ್ಲಿ ನಿನ್ನೆ ಈತನ ಶವ ಪತ್ತೆಯಾಗಿದೆ. ಮೋಟಾರ್ ಬೈಕ್ ಖರೀದಿಸಲು 2 ಲಕ್ಷ ರೂ.ಗಳೊಂದಿಗೆ ಸೋಮವಾರ ಅಪರಾಹ್ನ ಮನೆಯಿಂದ ಹೋಗಿದ್ದ ಖಾನ್ ರಾತ್ರಿಯಾದರೂ ಹಿಂದಿರುಗಿ ಬರಲಿಲ್ಲ. ಆತನಿಗಾಗಿ ಶೋಧ ನಡೆಸಿದಾಗ ಕಾರಿನಲ್ಲಿ ಗುಂಡೇಟು ತಗುಲಿನ ಶವ ಪತ್ತೆಯಾಗಿದ್ದು, ನಾಡ ಪಿಸ್ತೂಲ್ ಸಹ ಕಂಡುಬಂದಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡುಬಂದರೂ, ಪೊಲೀಸರು ಎಲ್ಲ ಆಯಾಮಗಳಿಗೆ ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin