ಕೊನೆಯ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ, ಭಾರತಕ್ಕೆ ಸರಣಿ ಜಯ

Cricket--02

ನವದೆಹಲಿ. ಡಿ.06 : ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದ 3 ನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದೆ. ಕುತೂಹಲಭರಿತ ಕೊನೆಯ ದಿನದಾಟದಲ್ಲಿ ಲಂಕಾದ ಆಲ್ ರೌಡರ್ ಡಿಸಿಲ್ವಾ ಅವರ ಸಮಯೋಚಿತ ಆಟದ ನೆರವಿನಿಂದ ಚಂಡಿಮಾಲ್ ಪಡೆ ಸೋಲನ್ನು ತಪ್ಪಿಸಿಕೊಂಡಿದೆ. ಆದರೂ ಲಂಕನ್ನಡ ಅದ್ಭುತವಾದ ಹೋರಾಟ ಎಲ್ಲರನ್ನು ಚಕಿತಗೊಳಿಸಿದೆ. 410 ರನ್ ಗಳ ಗುರಿಯನ್ನು ಬೆನ್ನಟ್ಟಿದ ಲಂಕಾ 5 ವಿಕೆಟ್ ನಷ್ಟಕ್ಕೆ 299 ರನ್ ಗಳನ್ನು ಮಾಡಿತ್ತು. ಇನ್ನು ದಿನದಾಟ ಮುಗಿಯುವ ಕೆಲವೇ ಹೊತ್ತಿಗೂ ಮುಂಚೆ ಎರಡೂ ತಂಡದ ನಾಯಕರು ಪದ್ಯ ಡ್ರಾ ನಿರ್ಧಾರಕ್ಕೆ ಒಪ್ಪಿಕೊಂಡರು.

ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ರನ್ ಹೋಲ್ ಹಾರಿಸಿದ್ದ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಹಾಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಇದರ ಜೊತೆಗೆ 1.0 ಅಂತರದಿಂದ ಲಂಕಾವನ್ನು ಮಣಿಸಿ ಸರಣಿಯನ್ನು ಕೂಡ ವಶಕ್ಕೆ ಪಡೆಯುವ ಮೂಲಕ ಕೊಹ್ಲಿ ತಂಡದ ನಾಯಕನಾಗಿ ಮತ್ತೊಂದು ದಾಖಲೆ ಮಾಡಿದ್ದಾರೆ .
ಸಂಕ್ಷಿಪ್ತ ಸ್ಕೋರ್ :
ಭಾರತ : 536 (ಡಿಕ್ಲೇರ್ ) ಎಂಟಿಫ್ಟ್ 246 (ಡಿಕ್ಲೇರ್)
ಶ್ರೀಲಂಕಾ : 373 ಮತ್ತು 5 ವಿಕೆಟ್ ನಷ್ಟಕ್ಕೆ 299

Facebook Comments

Sri Raghav

Admin