ಗ್ರೇಟರ್ ನೋಯ್ಡಾದ ಅಪಾರ್ಟ್‍ಮೆಂಟ್‍ನಲ್ಲಿ ತಾಯಿ-ಮಗಳ ಕಗ್ಗೊಲೆ

Delhi--2

ನೋಯ್ಡಾ, ಡಿ.6-ರಾಜಧಾನಿ ದೆಹಲಿಗೆ ಸಮೀಪದ ಗ್ರೇಟರ್ ನೋಯ್ಡಾದ ಗೌರ್ ನಗರ ಅಪಾರ್ಟ್‍ಮೆಂಟ್‍ನಲ್ಲಿ ತಾಯಿ ಮತ್ತು ಮಗಳ ಬರ್ಬರ ಕೊಲೆ ನಡೆದಿದೆ. ಹರಿತವಾದ ಆಯುಧ ಮತ್ತು ಕ್ರಿಕೆಟ್ ಬ್ಯಾಟ್‍ನಿಂದ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.ಈ ಘಟನೆ ನಂತರ ಮಹಿಳೆಯ ಮಗ ನಾಪತ್ತೆಯಾಗಿದ್ದು, ಈ ಕೃತ್ಯದಲ್ಲಿ ಆತ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರು ಅಪಾರ್ಟ್‍ಮೆಂಟ್‍ಗೆ ತೆರಳಿದಾಗ ಮನೆಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಹಂತಕನು ಕೃತ್ಯ ಎಸಗಿ ಶೌಚಾಲಯದ ಕಿಟಕಿ ಮೂಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.  ಕೊಲೆ ಮಾಡಿದ ನಂತರ ತಾಯಿ ಮತ್ತು ಮಗಳ ಶವಗಳನ್ನು ಬೆಡ್‍ಶಿಟ್‍ನಲ್ಲಿ ಸುತ್ತಿರುವುದು ಪತ್ತೆಯಾಗಿದೆ.   ಪೊಲೀಸರು ಸಿಸಿಟಿವಿ ಕ್ಯಾಮೆರಾದಲ್ಲಿನ ದೃಶ್ಯಗಳನ್ನು ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin