ಐವರ ಕಗ್ಗೊಲೆ ಪ್ರಕರಣ ಬೇಧಿಸಿದ ದೆಹಲಿ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Delhi-Murder--02

ನವದೆಹಲಿ, ಡಿ.7-ಕಳೆದ ಅಕ್ಟೋಬರ್‍ನಲ್ಲಿ ದೆಹಲಿಯ ಮಾನಸಸರೋವರ್ ಪಾರ್ಕ್ ಪ್ರದೇಶದ ಮನೆಯೊಂದರಲ್ಲಿ ವೃದ್ದೆ, ಆಕೆಯ ಮೂವರು ಪುತ್ರಿಯರು ಮತ್ತು ಸೆಕ್ಯೂರಿಟಿ ಗಾರ್ಡ್‍ನನ್ನು ಕೊಲೆಗೈದಿದ್ದ ಪ್ರಕರಣದ ಸಂಬಂಧ ಇನ್ನೂ ಇಬ್ಬರನ್ನು ಪೊಲೀಸರು ಬಂಧಿಸಿದ್ಧಾರೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟು ಏಳು ಆರೋಪಿಗಳು ಸೆರೆ ಸಿಕ್ಕಿದಂತಾಗಿದೆ.  ಅಪರಾಧ ತನಿಖಾ ವಿಭಾಗದ ಪೊಲೀಸರು ನಿನ್ನೆ ಇನ್ನಿಬ್ಬರು ಹಂತಕರನ್ನು ಬಂಧಿಸಿದ್ದು, ದರೋಡೆ ಮಾಡುವ ಉದ್ದೇಶದಿಂದ ಏಳು ಮಂದಿ ಐವರನ್ನು ಕೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಊರ್ಮಿಳಾ ಜಿಂದಾಲ್ (82), ಅವರ ಪುತ್ರಿಯರಾದ ಸಂಗೀತಾ ಗುಪ್ತಾ(56), ನೂಪರ್ ಜಿಂದಾಲ್(48), ಮತ್ತು ಅಂಜಲಿ ಜಿಂದಾಲ್(38) ಹಾಗೂ ಸೆಕ್ಯೂರಿಟಿ ಗಾರ್ಡ್ ರಾಕೇಶ್(42) ಅವರನ್ನು ಅ.7ರಂದು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು ಎಂದು ವಿಶೇಷ ಪೊಲೀಸ್ ಆಯುಕ್ತ ಆರ್.ಪಿ. ಉಪಾಧ್ಯಾಯ ಹೇಳಿದ್ದಾರೆ.

Facebook Comments

Sri Raghav

Admin