ಕಾಶ್ಮೀರದಲ್ಲಿ ಬೆಳ್ಳಂಬೆಳಿಗ್ಗೆ ನಡುಗಿದ ಭೂಮಿ, 5.4 ತೀವ್ರತೆ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Earth--02

ಜಮ್ಮು ಕಾಶ್ಮೀರ, ಡಿ.7- ಕಾಶ್ಮೀರದಲ್ಲಿ ಇಂದು ಮುಂಜಾನೆ 4.53ರ ಸುಮಾರಿಗೆ ಭೂಕಂಪ ಸಂಭವಿಸಿದ್ದು,ಮಧ್ಯಮ ತೀರ್ವತೆ ಭೂಕಂಪದ ಇದಾಗಿದ್ದು, ರಿಕ್ಟರ್ ಮಾಪನದಲ್ಲಿ 5.4 ತೀರ್ವತೆ ನಮೂದಾಗಿದೆ. ಜಮ್ಮು ಕಾಶ್ಮೀರ್ ಕ್ಸಿಂಗ್ಜಿಂಗ್ ಗಡಿ ಭಾಗ ಭೂಕಂಪದ ಕೇಂದ್ರ ಬಿಂದು ಎಂದು ಗುರುತಿಸಲಾಗಿದ್ದು, ಕಾಶ್ಮೀರ ಕಣಿವೆಯು ಭೂಕಂಪನ ತಡೆದುಕೊಳ್ಳುವ ಪ್ರತಿರೋಧತೆಯನ್ನು ಕಡಿಮೆ ಹೊಂದಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ಹೇಳಿದ್ದಾರೆ.

ನಿನ್ನೆಯಷ್ಟೆ ರಾತ್ರಿ ಉತ್ತರಪ್ರದೇಶದ ರುದ್ರಪ್ರಯಾಗ ಉತ್ತರಾಂಚಲ, ಹರಿಯಾಣ, ದೆಹಲಿ ಎನ್.ಸಿ.ಆರ್ ಭಾಗದಲ್ಲಿ ಲಘು ಭೂಕಂಪ ಆಗಿತ್ತು. ಅಲ್ಲಿ ಕೂಡ ಯಾವುದೇ ಜೀವ ಹಾನಿ ಆಸ್ತಿ ಹಾನಿ ಸಂಭವಿಸಿಲ್ಲ. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ ಉತ್ತರ ಭಾರತದ ಕೆಲವೆಡೆ ಇನ್ನಷ್ಟು ದಿನ ಭೂಕಂಪಗಳು ಆಗುವ ಸಂಭವನೀಯತೆ ಇದೆ ಎನ್ನಲಾಗುತ್ತಿದೆ.

Facebook Comments

Sri Raghav

Admin