ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್ ಅಸ್ವಸ್ಥಗೊಂಡ ಪಕ್ಷಿಗಳು, ಹಕ್ಕಿಜ್ವರ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

Kukkarahalli--02

ಮೈಸೂರು, ಡಿ.7- ಇತಿಹಾಸ ಪ್ರಸಿದ್ಧ ನಗರದ ಕುಕ್ಕರಹಳ್ಳಿ ಕೆರೆಗೆ ದೇಶ-ವಿದೇಶಗಳಿಂದ ವಿವಿಧ ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ಆದರೆ, ಬೆಳ್ಳಂಬೆಳಗ್ಗೆ ಇದ್ದಕ್ಕಿದ್ದಂತೆ ಎರಡು ಪೆಲಿಕಾನ್ ಪಕ್ಷಿಗಳು ಅಸ್ವಸ್ಥಗೊಂಡಿದ್ದು, ಆತಂಕ ಸೃಷ್ಟಿಸಿದೆ. ಪ್ರತಿದಿನ ಕುಕ್ಕರಹಳ್ಳಿ ಕೆರೆಗೆ ನೂರಾರು ಮಂದಿ ವಾಯು ವಿಹಾರಕ್ಕೆ ಆಗಮಿಸುತ್ತಾರೆ. ಬೆಳಗ್ಗೆ ಎರಡು ಪೆಲಿಕಾನ್ ಪಕ್ಷಿಗಳು ಅಸ್ವಸ್ಥಗೊಂಡಿದ್ದವು. ಕೆರೆಯ ಸಮೀಪ ಸುಸ್ತಾಗಿ ಬಿದ್ದಿದ್ದವು. ತಕ್ಷಣ ವಾಯು ವಿಹಾರಿಗಳು ಪೀಪಲ್ಸ್ ಫಾರ್ ಅನಿಮಲ್ ಸಂಘಟನೆಗೆ ವಿಷಯ ತಿಳಿಸಿದ್ದಾರೆ.

ಸಂಘಟನೆ ಸದಸ್ಯರು ಧಾವಿಸಿ ಎರಡು ಪಕ್ಷಿಗಳಿಗೂ ಪ್ರಥಮ ಚಿಕಿತ್ಸೆ ನೀಡಿದರು. ಅದರಲ್ಲಿ ಒಂದು ಪಕ್ಷಿ ಚೇತರಿಸಿಕೊಂಡಿದ್ದರಿಂದ ಮತ್ತೆ ಕೆರೆಗೆ ಬಿಟ್ಟಿದ್ದರು. ಆದರೆ, ಹಕ್ಕಿಜ್ವರ ಬಂದಿರಬಹುದೆಂಬ ಶಂಕೆಯಿಂದ ಪುನಃ ಬೋಟ್ ಸಹಾಯದಿಂದ ಕೆರೆಗೆ ಹೋಗಿ ಪಕ್ಷಿಯನ್ನು ಹೊರತಂದು ಎರಡಕ್ಕೂ ಚುಚ್ಚುಮದ್ದು ನೀಡಿದ್ದಾರೆ. ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಹಕ್ಕಿಗಳು ಅಸ್ವಸ್ಥಗೊಳ್ಳಲು ನಿಖರ ಕಾರಣ ಗೊತ್ತಾಗಲಿದೆ.

Facebook Comments

Sri Raghav

Admin