ಕೆ.ಜೆ.ಜಾರ್ಜ್’ರಿಂದ 850 ಕೋಟಿ ಬೆಲೆಬಾಳುವ 13 ಎಕರೆ ಭೂಮಿ ಸ್ವಾಹ..!

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh--01

ಬೆಂಗಳೂರು, ಡಿ.7- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು 850 ಕೋಟಿ ಬೆಲೆಬಾಳುವ 13 ಎಕರೆ ಸರ್ಕಾರಿ ಸ್ವತ್ತು ಸ್ವಾಹ ಮಾಡಿರುವ ಪ್ರಕರಣವನ್ನು ಬಹಿರಂಗಗೊಳಿಸಿರುವ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಈ ಸಂಬಂಧ 600 ಪುಟಗಳ ದಾಖಲೆ ಬಿಡುಗಡೆ ಮಾಡಿರುವುದಲ್ಲದೆ ಲೋಕಾಯುಕ್ತ, ಎಸಿಬಿ, ಬಿಎಂಟಿಎಫ್ ಹಾಗೂ ಎಸಿಎಂಎಂ ನ್ಯಾಯಾಲಯಲ್ಲಿ ದೂರು ದಾಖಲಿಸಿದ್ದಾರೆ.

ಇದಲ್ಲದೆ, ಹಿಂದಿನ ಜಿಲ್ಲಾಧಿಕಾರಿ, ತಹಸೀಲ್ದಾರ್‍ಗಳು, ಹಿಂದಿನ ಆಯುಕ್ತರು, ಬಿಡಿಎ ನಗರ ಯೋಜನಾಧಿಕಾರಿ, ಬಿಬಿಎಂಪಿ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧವೂ ಸರ್ಕಾರಿ ಭೂ ಕಬಳಿಕೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ, ವಂಚನೆ ಪ್ರಕರಣಗಳ ಸಂಬಂಧ ದೂರು ದಾಖಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಈ ಸಂಬಂಧ ವಿವರಗಳನ್ನು ನೀಡಿರುವ ಅವರು, ಕೆ.ಜೆ.ಜಾರ್ಜ್ ಪಾಲುದಾರಿಕೆಯ ಎಂಬೆಸ್ಸಿ ಗಾಲ್ಫ್ ಲಿಂಕ್ ಟೆಕ್‍ಪಾರ್ಕ್ ನಿರ್ಮಾಣದ ಹೆಸರಿನಲ್ಲಿ 850 ಕೋಟಿ ರೂ. ಬೆಲೆಬಾಳುವ 13 ಸಾವಿರ ಎಕರೆಯಷ್ಟು ಸರ್ಕಾರಿ ಸ್ವತ್ತನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಮಾಡಿರುವ ಅವರು, ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರಲ್ಲದೆ, ಸರ್ಕಾರಿ ಜಾಗವನ್ನು ಸರ್ಕಾರ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಎಂಬೆಸ್ಸಿ ಗಾಲ್ಫ್ ಲಿಂಕ್ ಟೆಕ್‍ಪಾರ್ಕ್ ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳ ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. 4 ಸಾವಿರ ಕೋಟಿ ರೂ. ಬೆಲೆಬಾಳುವ 52.3 ಎಕರೆಗಳಷ್ಟು ಸರ್ಕಾರಿ ಸ್ವತ್ತುಗಳಿಗೆ ನಕಲಿ ಮ್ಯುಟೇಷನ್ ರಿಜಿಸ್ಟರ್‍ಗಳನ್ನು ಸೃಷ್ಟಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕ್ರಯಕ್ಕೆ ಪಡೆದಿರುವುದು 52.3 ಎಕರೆ. ಆದರೆ, 65 ಎಕರೆ ಪ್ರದೇಶಕ್ಕೆ ಬೇಲಿ ಹಾಕಿದ್ದಾರೆ. ಎಂಬೆಸ್ಸಿ ಸಂಸ್ಥೆಯ ಒಟ್ಟು ವಿಸ್ತೀರ್ಣ 65 ಎಕರೆಗಳಷ್ಟು ಎಂದು ಆ ಸಂಸ್ಥೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಇದೆ. ಆದರೆ, ಕ್ರಯಪತ್ರದಲ್ಲಿರುವುದು 52 ಎಕರೆ. 13 ಎಕರೆಗಳಷ್ಟು ಸರ್ಕಾರಿ ಜಾಗ ಒತ್ತುವರಿಯಾಗಿದ್ದು, ಇದರ ಮೌಲ್ಯ ಸುಮಾರು 850 ಕೋಟಿ ರೂ. ಎಂದು ತಿಳಿಸಿದರು.

ಈ ಸಂಸ್ಥೆಯ ಸರ್ವೆ ನಂ.7/4ರ 4.01 ಎಕರೆ ಸರ್ಕಾರಿ ಸ್ವತ್ತನ್ನು ಶಾಸಕರಾದ ಎನ್.ಎ.ಹ್ಯಾರಿಸ್ ಮತ್ತು ಅವರ ಕುಟುಂಬವರ್ಗದವರು ಮಾರಾಟ ಮಾಡಿರುವ ದಾಖಲೆಗಳ ಬಗ್ಗೆಯೂ ಸಾಕಷ್ಟು ಅನುಮಾನ ವ್ಯಕ್ತವಾಗಿದೆ ಎಂದು ಹೇಳಿದರು. ಎಂಬೆಸ್ಸಿ ಸಂಸ್ಥೆ ನಿರ್ಮಾಣದ ಹೆಸರಿನಲ್ಲಿ ಚಲ್ಲಘಟ್ಟ ಕಣಿವೆಯ ರಾಜಕಾಲುವೆಯ ಕೋಟ್ಯಂತರ ಬೆಲೆಬಾಳುವ ಬಫರ್‍ಜೋನ್ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ.ವಾಸದ ಉದ್ದೇಶಕ್ಕೆಂದು ಭೂ ಪರಿವರ್ತನೆಯಾಗಿರುವ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳ ನಕ್ಷೆಗಳಿಗೆ ಬಿಡಿಎ ನಗರ ಯೋಜನೆ ಅಧಿಕಾರಿಗಳು ಕಾನೂನು ಬಾಹಿರ ಮಂಜೂರಾತಿ ನೀಡಿದ್ದಾರೆ. ಬಿಡಿಎ ಆಯುಕ್ತರು ಸ್ವಾಧೀನಪತ್ರ ನೀಡಿದ್ದಾರೆ. ಒಟ್ಟು ನಿರ್ಮಿತ ಪ್ರದೇಶದ ಶೇ.90ರಷ್ಟು ಜಾಗವನ್ನು ದುರುದ್ದೇಶಪೂರ್ವಕವಾಗಿ ಮರೆ ಮಾಚಲಾಗಿದೆ. ಪ್ರಸ್ತುತ ಪಾಲಿಕೆಗೆ ಪಾವತಿಸುತ್ತಿರುವ ಆಸ್ತಿ ತೆರಿಗೆಯಲ್ಲಿ 09 ಕೋಟಿ ರೂ.ಗೂ ಹೆಚ್ಚು ಆಸ್ತಿ ತೆರಿಗೆಯನ್ನು ಕೆ.ಜೆ.ಜಾರ್ಜ್ ಮಾಲೀಕತ್ವದ ಎಂಬೆಸ್ಸಿ ಗಾಲ್ಫ್ ಲಿಂಕ್ ಟೆಕ್ ಪಾರ್ಕ್ ಸಂಸ್ಥೆ ವಂಚಿಸುತ್ತಿದೆ. ತಮ್ಮ ಆಸ್ತಿ ಘೋಷಣಾ ಪ್ರಮಾಣ ಪತ್ರದಲ್ಲಿ ಈ ಸಂಸ್ಥೆಯ ಮಾಲೀಕತ್ವದ ಬಗ್ಗೆ ಜಾರ್ಜ್ ಮರೆಮಾಚಿದ್ದಾರೆ ಎಂದು ಆರೋಪಿಸಿದರು. ಈ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಾಸಕ ಎನ್.ಎ.ಹ್ಯಾರಿಸ್ ಹಾಗೂ ಅವರ ಕುಟುಂಬದವರು ಮಾಡಿರುವ ಅಕ್ರಮಗಳ ಬಗ್ಗೆ ತನಿಖೆ ಮಾಡಬೇಕು. ಒತ್ತುವರಿ ತೆರವು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Facebook Comments

Sri Raghav

Admin