ಚಿತ್ರಮಂದಿರಗಳಲ್ಲಿ ಸ್ಮಗ್ಲರ್ ಆರ್ಭಟ..

ಈ ಸುದ್ದಿಯನ್ನು ಶೇರ್ ಮಾಡಿ

smguler-1

ಚಂದನವನದಲ್ಲಿ ತಮ್ಮದೇ ಛಾಪು ಮೂಡಿಸಿಕೊಂಡು ಜಂಭದ ಹುಡುಗಿಯಾಗಿ ಪ್ರೇಕ್ಷಕರ ಮನಗೆದ್ದಂತಹ ಪ್ರಿಯ ಹಾಸನ್ ಬಿಂದಾಸ್ ಹುಡುಗಿಯಾಗಿ ಮಿಂಚಿ ಈಗ ಸ್ಮಗ್ಲರ್ ಆಗಿ ತೆರೆ ಮೇಲೆ ಬರುತ್ತಿದ್ದಾಳೆ. ಲೇಟ್ ಆದರೂ ಲೇಟೆಸ್ಟ್ ಆಗಿ ಎಂಟ್ರಿ ಕೊಡುತ್ತಿರುವ ಸ್ಮಗ್ಲರ್ ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರಚಾರದೊಂದಿಗೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಿ ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗಿ ತಮ್ಮ ಸಾಮಥ್ರ್ಯವನ್ನು ಸ್ಮಗ್ಲರ್ ಚಿತ್ರದ ಮೂಲಕ ತೋರಿಸಲು ಮುಂದಾಗಿದ್ದಾರೆ. ಈ ಹಿಂದೆ ಬಂದಂತಹ ಜಂಭದ ಹುಡುಗಿ, ಬಿಂದಾಸ್ ಹುಡುಗಿ ಎರಡೂ ಚಿತ್ರಗಳು ಶತದಿನ ಕಂಡ ನಂತರ ಈಗ ಕನ್ನಡಿಗರ ಹೃದಯ ಕದಿಯಲು ಸ್ಮಗ್ಲರ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಯಶಸ್ವಿ ಸಂಗೀತ ನಿರ್ದೇಶಕ ಚಕ್ರಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿವೆ. ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಮಾಲ್ಗುಡಿ ಶುಭ, ಹೇಮಂತ್, ಅನುರಾಧಾ ಭಟ್ ಹಾಡುಗಳಿಗೆ ದನಿಯಾಗಿದ್ದಾರೆ. ಅಲ್ಲದೆ, ನಾಯಕಿ ಪ್ರಿಯಾಹಾಸನ್ ಕೂಡ ಮೊಟ್ಟಮೊದಲ ಬಾರಿಗೆ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ತೆಲುಗಿನ ಸುಮನ್, ರವಿಕಾಳೆ ಸೇರಿದಂತೆ ತೆಲುಗಿನ ಹಲವಾರು ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿರುವುದು ಸ್ಮಗ್ಲರ್‍ನ ವಿಶೇಷತೆಯಾಗಿದೆ. ನಾಯಕಿ ಪ್ರಿಯಾಹಾಸನ್ ಅವರು ಚಿತ್ರದಲ್ಲಿ ಎರಡು ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಒಂದು ಹೋಮ್ಲಿ ಪಾತ್ರವಾದರೆ ಮತ್ತೊಂದು ಬಜಾರಿ, ರೌಡಿ ಥರದ ಪಾತ್ರವಾಗಿದೆ. ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ತನ್ನ ಚಿತ್ರದ ಬಗ್ಗೆ ಮಾತನಾಡಿದ ಪ್ರಿಯಾ ಹಾಸನ್ ಅವರು ನಮ್ಮ ಬ್ಯಾನರ್‍ನಲ್ಲಿ ಈವರೆಗೆ ನಿರ್ಮಿಸಿದ ಎಲ್ಲಾ ಚಿತ್ರಗಳಿಗಿಂತ ಹೆಚ್ಚಿನ ಬಜೆಟ್‍ನಲ್ಲಿ ನಿರ್ಮಾಣವಾಗಿರುವ ಚಿತ್ರವಿದು. ಈವರೆಗೆ ನೋಡಿರದಂಥ ಪ್ರಿಯಾ ಹಾಸನ್ ಅವರನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆ. ನೆಗೆಟಿವ್ ಶೇಡ್ ಇರುವಂಥ ಪಾತ್ರ ಇದಾಗಿದೆ.

ಒಬ್ಬ ಕನ್ನಡತಿಯಾಗಿ ನಾನು ಮಾಡಿರುವ ಈ ಪ್ರಯತ್ನವನ್ನು ಸಹೃದಯಿಗಳಾದ ಕನ್ನಡ ಜನತೆ ಹಿಂದಿನ ಚಿತ್ರಗಳಂತೆಯೇ ಪ್ರೋತ್ಸಾಹಿಸುವರೆಂಬ ಸಂಪೂರ್ಣ ನಂಬಿಕೆಯಿದೆ ಎಂದು ಹೇಳುತ್ತಾ ಚಿತ್ರ ನಿರ್ಮಿಸಬಹುದು. ಆದರೆ, ಚಿತ್ರ ಬಿಡುಗಡೆಗೆ ಬಹಳಷ್ಟು ಸಾಹಸ ಮಾಡಬೇಕಿದೆ. ನನ್ನ ಮುಂದಿನ ಚಿತ್ರ ಗಂಡುಬೀರಿಯನ್ನು ಜನವರಿಯಲ್ಲಿ ಆರಂಭಿಸಲಿದ್ದೇನೆ. ಹಾಗೆಯೇ ಚಿತ್ರದ ಪೂರ್ವ ತಯಾರಿಯನ್ನು ಪಕ್ಕಾ ಮಾಡಿಕೊಂಡು ಮುಂದಾಗುತ್ತೇನೆ. ಈ ಚಿತ್ರಕ್ಕೆ ಬಹಳಷ್ಟು ಶ್ರಮ ವಹಿಸಿ ನಿಮ್ಮ ಮುಂದೆ ತರುತ್ತಿದ್ದೇನೆ ಎಂದು ಹೇಳಿದರು. ಇವರ ಬೆನ್ನುಲುಬಾಗಿ ಪತಿ ರಾಮ್ ಪ್ರಿಯ ಹಾಗೂ ದೊಡ್ಡಮ್ಮರಾದ ಗೌರಮ್ಮ ಮತ್ತು ಸ್ನೇಹಿತರು ಸಾಥ್ ನೀಡಿದ್ದಾರೆ.

Facebook Comments

Sri Raghav

Admin