ಚುನಾವಣೆ ಹತ್ತಿರ ಬಂದಾಗ ಅಭಿವೃದ್ದಿ ಮಾಡುತ್ತಿದ್ದಾರೆ : ಸಿಎಂ ವಿರುದ್ಧ ಹೆಚ್ಡಿಕೆ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-vs-Kumaraswamy

ಬೆಂಗಳೂರು, ಡಿ.7- ಅಭಿವೃದ್ದಿ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ  ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಹತ್ತಿರ ಬಂದಾಗ ಅಭಿವೃದ್ದಿ ಕಾರ್ಯಕ್ರಮಗಳನ್ನು ಶುರುಮಾಡುತ್ತಿದ್ದಾರೆ,ಜನರ ತೆರಿಗೆ ಹಣದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ಕಳೆದ ನಾಲ್ಕೂವರೆ ವರ್ಷದಲ್ಲಿ ಒಮ್ಮೆಯೂ ಉತ್ತರ ಕನ್ನಡ ಜಿಲ್ಲೆಗೆ ಕಾಲಿಡದ ಮುಖ್ಯಮಂತ್ರಿಯವರು ಏಕಾಏಕಿ ಹೋಗಿದ್ದಾರೆ.ಭಟ್ಕಳ ಒಂದರಲ್ಲೇ 1500 ಕೋಟಿ ರೂ ಅನುಧಾನ ನೀಡುವ ಘೋಷಣೆ ಮಾಡಿದ್ದಾರೆ.ಇದು ಪ್ರಚಾರವಲ್ಲದೇ ಮತ್ತೇನು ಎಂದು ವ್ಯಂಗ್ಯವಾಡಿದರು. 10ರೂ ಗೆ ತಯಾರಾಗುವ ಮದ್ಯಕ್ಕೆ 70 ರೂ ತೆರಿಗೆ ಹಾಕುವ ಮೂಲಕ ಪಿಕ್ ಪಾಕೆಟ್ ಮಾಡಲು ಹೊರಟಿದ್ದಾರೆ. ಅನ್ನ ಕೊಟ್ಟಿದ್ದು , ಹಾಲುಕೊಟ್ಟಿದ್ದೇ ದೊಡ್ಡ ಸಾಧನೆ ಎಂದು ನಂಭಿಕೊಂಡಿದ್ದಾರೆ.ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ.

ರೈತರ ಸಾಲ ಮನ್ನಕ್ಕೆ ಸಂಬಂದಿಸಿದಂತೆ ರಾಜ್ಯ ಸರ್ಕಾರ ಹಣ ನೀಡಿಲ್ಲ. ಮುಂಬರುವ ಸರ್ಕಾರ ಈ ಹಣ ನೀಡಬೇಕಾಗುತ್ತದೆ ಎಂದರು.ಆದರೆ ಸಾಲ ಮನ್ನ ಮಾಡಿದೆ ಆದರೆ ರೈತರ ಸಾಲ ಮನ್ನ ಮಾಡಿರುವ ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದರು. ಜೆಡಿಸ್ ಪಕ್ಷದಲ್ಲಿದ್ದು ಎಲ್ಲವನ್ನೂ ಪಡೆದುಕೊಂಡ ಮೇಲೆ ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಪಕ್ಷದಬಗ್ಗೆ ಗೌರವವಿದ್ದರೆ ಇರಲಿ ,ಇಲ್ಲದಿದ್ದರೆ ಪಕ್ಷಬಿಟ್ಟು ಹೋಗಲಿ.ಅಂತಹ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ತಿಳಿಸಿದರು.

Facebook Comments

Sri Raghav

Admin