ತಿರುಚಿರಾಪಳ್ಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಸಾವು

Accident--02

ತಿರುಚಿರಾಪಳ್ಳಿ (ತಮಿಳುನಾಡು), ಡಿ.7-ನಿಂತಿದ್ದ ಲಾರಿಗೆ ವ್ಯಾನೊಂದು ಅಪ್ಪಳಿಸಿದ ಪರಿಣಾಮ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರೂ ಸೇರಿದಂತೆ ಒಂಭತ್ತು ಮಂದಿ ಮೃತಪಟ್ಟ ಭೀಕರ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿಯ ತಾವರನ್‍ಕುರಚ್ಚಿಯಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಕನ್ಯಾಕುಮಾರಿಯಿಂದ ತಿರುಪತಿ ಮಾರ್ಗವಾಗಿ ತಿರುಚಿರಾಪಳ್ಳಿಗೆ ತೆರಳುತ್ತಿದ್ದ ವ್ಯಾನ್ ರಸ್ತೆ ಬದಿ ನಿಂತಿದ್ದ ಲಾರಿಗೆ ಅಪ್ಪಳಿಸಿ ಈ ದುರಂತ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಭೀಕರ ದುರ್ಘಟನೆಯಲ್ಲಿ ಮೂರು ಮಕ್ಕಳು, ಇಬ್ಬರು ಮಹಿಳೆಯರೂ ಸೇರಿದಂತೆ ಒಂಭತ್ತು ಮಂದಿ ಸ್ಥಳದಲ್ಲೇ ಮೃತಪಟ್ಟರು. ತೀವ್ರ ಗಾಯಗೊಂಡಿರುವ ಇತರ ನಾಲ್ವರು ಪ್ರಯಾಣಿಕರನ್ನು ತಿರುಚಿರಾಪಳ್ಳಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

Facebook Comments

Sri Raghav

Admin