ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ

metro

ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೇಡ್ (ಬಿಎಂಆರ್ಸಿಎಲ್) ನಲ್ಲಿ ಗ್ರ್ಯಾಜುಯೆಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ : 80
ಹುದ್ದೆಗಳ ವಿವರ
1). ಗ್ರ್ಯಾಜುಯೆಟ್ ಇಂಜಿನಿಯರ್ (ಸಿವಿಲ್)

ವಿದ್ಯಾರ್ಹತೆ ; ಇಂಜಿನಿಯರಿಂಗ್ ಪದವಿ (ಸಿವಿಲ್) ಪಡೆದಿರಬೇಕು. ಕಡ್ಡಾಯವಾಗಿ ಕನ್ನಡ ಬಲ್ಲವರಾಗಿದ್ದು, ಬರೆಯಲು, ಓದಲು ಮತ್ತು ಅರ್ಥೈಸಿಕೊಳ್ಳುವ ಜ್ಞಾನ ಹೊಂದಿರಬೇಕು.
ವಯೋಮಿತಿ ; ಗರಿಷ್ಟ 35 ವರ್ಷದೊಳಗಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಆಯ್ಕೆ ವಿಧಾನ ; ಲೀಖಿತ ಪರೀಕ್ಷೆ ಆಧಾರದಲ್ಲಿ ಆಯ್ಕೆ ಪ್ರಕ್ರೀಯೆ ನಡೆಯಲಿದೆ.

ಶುಲ್ಕ ; ಸಾಮಾನ್ಯ ವರ್ಗ, ಪ್ರವರ್ಗ 1, 2ಎ, 2ಬಿ, 3ಎ,3ಬಿಗೆ ಸೇರಿದವರಿಗೆ 900 ರೂ,  ಪ.ಜಾ, ಪ.ಪಂದವರಿಗೆ 400 ರೂ ಶುಲ್ಕ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-12-2017
ಹೆಚ್ಚಿನ ಮಾಹಿತಿಗಾಗಿ  ವೆಬ್ ಸೈಟ್ ವಿಳಾಸ  http://kannada.bmrc.co.in  ಗೆ ಭೇಟಿ ನೀಡಿ.

ಅಧಿಸೂಚನೆ

Notification-BMRCL-Graduate-Engineer-Posts-001

Facebook Comments