ನೇಪಾಳದಲ್ಲಿ 2ನೇ ಹಂತ ಚುನಾವಣೆಗೆ ಬಿರುಸಿನ ಮತದಾನ

Nepal--03

ಕಠ್ಮಂಡು, ಡಿ.7-ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಐತಿಹಾಸಿಕ ಪ್ರಾಂತೀಯ ಮತ್ತು ಸಂಸದೀಯ ಚುನಾವಣೆಯ ಎರಡನೇ ಮತ್ತು ಕೊನೆ ಹಂತದ ಚುನಾವಣೆಗೆ ಇಂದು ಭಾರೀ ಬಂದೋಬಸ್ತ್ ನಡುವೆ ಬಿರುಸಿನ ಮತದಾನ ನಡೆಯಿತು. ವಿಶ್ವದ ಏಕೈಕ ಸಂಪೂರ್ಣ ಹಿಂದೂ ರಾಷ್ಟ್ರವಾಗಿರುವ ನೇಪಾಳದ 45 ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಚುರುಕಿನ ಮತದಾನ ನಡೆದಿದ್ದು, ಬಹು ನಿರೀಕ್ಷಿತ ರಾಜಕೀಯ ಸ್ಥಿರತೆ ಸ್ಥಾಪನೆಯಾಗುವ ಆಶಾಭಾವನೆ ಮತದಾರರಲ್ಲಿದೆ.

ಎರಡನೇ ಹಂತದ ಮತದಾನಕ್ಕಾಗಿ 12.2 ದಶಲಕ್ಷ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸುವ ಅಧಿಕಾರ ಪಡೆದಿದ್ದಾರೆ. ೪೫ ಜಿಲ್ಲೆಗಳ 128 ಸಂಸದೀಯ ಕ್ಷೇತ್ರಗಳು ಹಾಗೂ 256 ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಏರ್ಪಟ್ಟಿದ್ದು, ಕೊರೆಯುವ ಚಳಿಯನ್ನು ಲೆಕ್ಕಿಸದೇ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಕಂಡುಬಂದಿತು. ಪ್ರಧಾನಮಂತ್ರಿ ಶೇರ್ ಬಹದ್ದೂರ್ ದೇವುಬಾ ಸೇರಿದಂತೆ ಒಟ್ಟು 4,482 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದೆ.

Facebook Comments

Sri Raghav

Admin