ಬಯಲಾಯ್ತು ಮತ್ತೊಬ್ಬ ಸ್ವಾಮೀಜಿಯ ಪಲ್ಲಂಗ ಪುರಾಣ

ಈ ಸುದ್ದಿಯನ್ನು ಶೇರ್ ಮಾಡಿ

Swamiji--02

ಹುಬ್ಬಳ್ಳಿ, ಡಿ.7- ಯಲಹಂಕದ ಮದ್ದೇವಣ್ಣಪುರ ಮಠದ ಕಿರಿಯ ಸ್ವಾಮೀಜಿಯೊಬ್ಬರ ಪಲ್ಲಂಗ ಪುರಾಣ ಮಾಸುವ ಮುನ್ನವೇ ಕೊಪ್ಪಳ ಜಿಲ್ಲೆಯ ಗಂಗಾವತಿಯ ಸ್ವಾಮೀಜಿಯೊಬ್ಬರ ಪಲ್ಲಂಗ ಪುರಾಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಜತೆ ಸ್ವಾಮೀಜಿ ವಸತಿ ಗೃಹದಲ್ಲಿರುವ ವಿಡಿಯೋ ವೈರಲ್ ಆಗಿದೆ. ಕೊಪ್ಪಳ ಜಿಲ್ಲೆ, ಗಂಗಾವತಿಯ ಈ ಸ್ವಾಮೀಜಿಯ ಪಲ್ಲಂಗ ಪುರಾಣದ ಸ್ಫೋಟಕ ಸತ್ಯ ಕಾರು ಚಾಲಕನಿಂದಲೇ ಬಹಿರಂಗಗೊಂಡಿದೆ.

ಈ ಆರೋಪವನ್ನು ಸ್ವಾಮೀಜಿ ತಳ್ಳಿಹಾಕಿದ್ದಾರೆ. ಸ್ವಾಮೀಜಿ ಸಭೆ-ಸಮಾರಂಭ, ಇನ್ನಿತ ರ ಕಾರ್ಯಕ್ರಮಗಳಿಗೆ ತೆರಳಿದ ಪ್ರದೇಶಗಳಲ್ಲಿ ಮಹಿಳೆಯರಿಗಾಗಿ ಬೇಡಿಕೆ ಇಡುತ್ತಿದ್ದರು. ಇದರಿಂದಾಗಿ ನಾನು, ಮಹಿಳೆಯರು ಸೇರಿದಂತೆ ಅಲ್ಲಿನ ಗ್ರಾಮಸ್ಥರಿಂದ ಸಾಕಷ್ಟು ಹೊಡೆತ ತಿಂದಿದ್ದೇವೆ ಎಂದು ಕಾರು ಚಾಲಕ ಹೇಳಿಕೊಂಡಿದ್ದಾನೆ. ಪ್ರಸ್ತುತ ವೈರಲ್ ಆಗಿರುವ ವಿಡಿಯೋ ನಾಲ್ಕು ವರ್ಷದ ಹಿಂದಿನದ್ದು. ಆದರೆ, ಇದು ಎರಡು ತಿಂಗಳ ಹಿಂದೆ ವೈರಲ್ ಆಗಿದೆ. ಹೀಗಾಗಿ ಈ ವಿಡಿಯೋ ಬಗ್ಗೆ ಹಲವು ಅನುಮಾನಗಳು ಕೂಡ ಹುಟ್ಟಿಕೊಂಡಿವೆ. ಆದರೆ, ಸ್ವಾಮೀಜಿ ಮಹಿಳೆಯೊಂದಿಗೆ ಲಾಡ್ಜ್‍ನಲ್ಲಿರುವ ವಿಡಿಯೋ ವೈರಲ್ ಆಗಿರುವುದು ಭಕ್ತರಲ್ಲಿ ಅಸಮಾಧಾನ ಉಂಟುಮಾಡಿದೆ.

Facebook Comments

Sri Raghav

Admin