ಬಾಲ ಮಂದಿರದಿಂದ 8 ಬಾಲಕರು ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

child-1
ಬೆಂಗಳೂರು, ಡಿ.7- ಕಾನೂನು ಸಂಘರ್ಷದಡಿ ಬಾಲಮಂದಿರ ಸೇರಿದ್ದ ಮಕ್ಕಳ ಪೈಕಿ 8 ಬಾಲಕರು ಪರಾರಿಯಾಗಿರುವ ಘಟನೆ ಮಡಿವಾಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಡಿವಾಳದಲ್ಲಿನ ಬಾಲಮಂದಿರದಿಂದ 8 ಮಂದಿ ಬಾಲಕರು ಡಿ.3ರಂದು ರಾತ್ರಿ ಊಟ ಮಾಡಿದ ಬಳಿಕ ಶೌಚಾಲಯದ ಕಿಟಕಿ ಗ್ರಿಲ್ ಮುರಿದು ಅಲ್ಲಿಂದ ನುಸುಳಿ ಪರಾರಿಯಾಗಿದ್ದಾರೆ.  ಈ ಬಾಲಕರು ಎಲ್ಲಿಗೆ ಹೋದರೆಂಬುದು ತಿಳಿದು ಬಂದಿಲ್ಲ. ಬಾಲಕರು ಬಾಲಮಂದಿರದಿಂದ ತಪ್ಪಿಸಿಕೊಂಡಿರುವ ಬಗ್ಗೆ ಬಾಲಮಂದಿರದ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಾಲಕರು ಪತ್ತೆಗೆ ಶೋಧ ಕೈಗೊಂಡಿದ್ದಾರೆ.

Facebook Comments