ಬೆಲೂನ್‍ ಪ್ರಾಣಿ-ಪಕ್ಷಿಗಳ ವಿಸ್ಮಯ ಲೋಕಕ್ಕೆ ನೀವು ಭೇಟಿ ಕೊಡಿ

ಈ ಸುದ್ದಿಯನ್ನು ಶೇರ್ ಮಾಡಿ

baloon-4
ಕಲಾಪ್ರತಿಭೆ ಉಹಾತೀತ.. ಸೌಂದರ್ಯ ನೋಡುವವರ ಕಣ್ಣಿನಲ್ಲಿದೆ ಎಂಬಂತೆ ಕಲೆಯು ಸೃಷ್ಟಿಸುವವರ ಕೈಯಲ್ಲಿದೆ..!  ಬೆಲೂನ್‍ಗಳಿಂದ ಸೃಷ್ಟಿಸಿದ ಪ್ರಾಣಿ-ಪಕ್ಷಿಗಳು ಉದಯರವಿ ನಾಡು ಜಪಾನಿನ ಯುವಕನೊಬ್ಬ ಅದ್ಭುತ ಕಲೆಗೆ ಸಾಕ್ಷಿಯಾಗಿದೆ.  24 ವರ್ಷದ ಮಸಯೊಷಿ ಮಾಟ್ಸುಮೊಟೋ ಬಗೆಬಗೆ ಬಣ್ಣಗಳ ವಿವಿಧ ಗಾತ್ರಗಳ ಬೆಲೂನ್‍ಗಳನ್ನು ಬಳಸಿ ಜೀವ ಸಂಕುಲಗಳನ್ನು ಸೃಷ್ಟಿಸುವುದರಲ್ಲಿ ಸಿದ್ಧಹಸ್ತ. ಕೀಟ. ಮೀನು, ಊಸರವಳ್ಳಿ, ಸಹಸ್ರಪಾದಿ, ಚಿಟ್ಟೆ, ಗಿಳಿ, ಮೇಕೆ, ಕಾಡೆಮ್ಮೆ, ಕೋಳಿ, ಬಾತು, ದುಂಬಿ-ಹೀಗೆ ಈತ ಸೃಷ್ಟಿಸಿರುವ ಜೀವಜಂತುಗಳ ಪಟ್ಟಿ ಬೆಳೆಯುತ್ತದೆ.

baloon-3

baloon-1

ವನ್ಯಜೀವಿಗಳ ಮತ್ತು ಪಕ್ಷಿ ಸಂಕುಲಗಳ ಬಗ್ಗೆ ವಿಶೇಷ ಪ್ರೀತಿ ಕಾಳಜಿ ಹೊಂದಿರುವ ಮಸಯೋಷಿ ಕಳೆದ ಎಂಟು ವರ್ಷಗಳಿಂದ ಈ ಹವ್ಯಾಸವನ್ನು ಬೆಳೆಸಿಕೊಂಡಿದ್ದಾನೆ. ಇದು ಈತನ ಸ್ವಪ್ರತಿಭೆಯ ಫಲ. ಇದಕ್ಕಾಗಿ ಯಾರಿಂದಲೂ ತರಬೇತಿ ಪಡೆದಿಲ್ಲ. ಮೇಲಾಗಿ ಮಸಯೋಷಿ ತನ್ನ ಕಲಾಕೃತಿ ಸೃಷ್ಟಿಗಾಗಿ ಯಾವುದೇ ಮಾರ್ಕರ್, ಸ್ಟಿಕ್ಕರ್ ಅಥವಾ ಪೂರಕ ವಸ್ತುಗಳನ್ನು ಬಳಸುವುದಿಲ್ಲ. ವಿವಿಧ ಗಾತ್ರದ ವೈವಿಧ್ಯಮಯ ಬಣ್ಣಗಳ ಬೆಲೂನ್‍ಗಳೇ ಈತನ ಕಚ್ಚಾ ವಸ್ತು, ಅವುಗಳನ್ನು ಊದಿ ತನಗೆ ಬೇಕಾದ ಆಕಾರಕ್ಕೆ ತಿರುಗಿಸಿ ಗಂಟು ಹಾಕುತ್ತಾ ಪ್ರಾಣಿ-ಪಕ್ಷಿಗಳನ್ನು ಸೃಷ್ಟಿಸುತ್ತಾನೆ. ಒಂದು ಕಲಾಕೃತಿ ನಿರ್ಮಿಸಲು ಎರಡು ತಾಸು ಬೇಕಾಗುತ್ತದೆ. ಕ್ಲಿಷ್ಟ ವಿನ್ಯಾಸದ ಪ್ರಾಣಿಗಳನ್ನು ಮರುಸೃಷ್ಟಿಸಲು ಆರು ಗಂಟೆಗಳು ಬೇಕು ಎನ್ನುತ್ತಾನೆ ಮಸಯೋಷಿ ಜನ್ಮದಿನ, ಸಭೆ-ಸಮಾರಂಭಗಳಲ್ಲಿ ಉಡುಗೊರೆಗಳನ್ನು ನೀಡಲು ಈತನ ಬೆಲೂನ್ ಕಲಾಕೃತಿಗಳು ಬಹು ಬೇಡಿಕೆಯ ಸರಕುಗಳಾಗಿವೆ.

baloon-2

Facebook Comments