ಭಾರತದ ಡ್ರೋಣ್ ವಾಯು ಪ್ರದೇಶ ಪ್ರವೇಶಿಸಿದ್ದಕ್ಕೆ ಚೀನಾ ಸೇನೆ ಆಕ್ಷೇಪ

ಈ ಸುದ್ದಿಯನ್ನು ಶೇರ್ ಮಾಡಿ

Drone--02

ಬೀಜಿಂಗ್, ಡಿ.7-ಭಾರತೀಯ ಮಾನವರಹಿತ ವೈಮಾನಿಕ ವಾಹನ (ಯುಎವಿ) ತನ್ನ ವಾಯು ಪ್ರದೇಶವನ್ನು ಪ್ರವೇಶಿಸಿದ ಬಗ್ಗೆ ಚೀನಾ ಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದ ಡ್ರೋಣ್(ಯುಎವಿ) ಇತ್ತೀಚೆಗೆ ಚೀನಾ ಗಡಿಯಲ್ಲಿ ಪತನಗೊಂಡಿತ್ತು. ಚೀನಿ ಯೋಧರು ಇದನ್ನು ಪತ್ತೆ ಮಾಡಿ ಇದು ಭಾರತದ್ದು ಎಂದು ಗುರುತಿಸಿದ್ದರು.  ಈ ಬಗ್ಗೆ ಇಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ಸೇನಾಧಿಕಾರಿ ಝಾಂಗ್ ಶೂಯಿಲಿ, ಭಾರತದ ಈ ಕ್ರಮವು ಚೀನಾದ ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಖಂಡಿಸಿದ್ದಾರೆ.

Facebook Comments

Sri Raghav

Admin