ಮಿಸ್ಟರ್ ಪರ್ಫೆಕ್ಟ್ ಎಂಟ್ರಿ..

ಈ ಸುದ್ದಿಯನ್ನು ಶೇರ್ ಮಾಡಿ

mi.per-1

ಕನ್ನಡದ ಕಟ್ಟಾಳು, ನಾಡು-ನುಡಿ ವಿಚಾರವಾಗಿ ಸದಾ ಮುಂಚೂಣಿಯಲ್ಲಿ ನಿಂತು ಕನ್ನಡಕ್ಕಾಗಿ ಹೋರಾಟ ಮಾಡುವ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಅವರ ಸುಪುತ್ರ ಅಭಿನಯದ ಮಿಸ್ಟರ್ ಪರ್ಫೆಕ್ಟ್ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಅನೂಪ್ ಸಾ.ರಾ.ಗೋವಿಂದು ಈ ಹಿಂದೆ ಸಾಗುವ ದಾರಿಯಲ್ಲಿ , ಡವ್ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡುವ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಈಗ ಮಿಸ್ಟರ್ ಪರ್ಫೆಕ್ಟ್ ಆಗಲು ಹೊರಟಿದ್ದಾರೆ. ಖ್ಯಾತ ಸಾಹಿತಿ ವಿ.ನಾಗೇಂದ್ರ ಪ್ರಸಾದ್‍ರವರ ಮ್ಯೂಸಿಕ್ ಬಜಾರ್ ಆಡಿಯೋ ಮೂಲಕ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್‍ಗಳು ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಇನ್ನು ಚಿತ್ರವು ತೆರೆ ಮೇಲೆ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಈ ಚಿತ್ರಕ್ಕೆ ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಎ.ರಮೇಶ್‍ಬಾಬು.

ತೆಲುಗು ಮೂಲದ ಆವುಲ ಸುಬ್ಬರಾಯುಡು ಈ ಚಿತ್ರದ ನಿರ್ಮಾಪಕರು. ಪ್ರಭಾಕರ ರೆಡ್ಡಿಯವರ ಛಾಯಾಗ್ರಹಣವಿದೆ. ಈ ಚಿತ್ರವು ತಂದೆ-ಮಗನ ಬಾಂಧವ್ಯದ ಕಥಾಹಂದರ ಒಳಗೊಂಡಿದ್ದು, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳು ಕೂಡ ಸೇರಿಕೊಂಡಿವೆ. ಇತ್ತೀಚೆಗೆ ಬರುತ್ತಿರುವ ಬಹುತೇಕ ಸಸ್ಪೆನ್ಸ್ ಚಿತ್ರಗಳ ನಡುವೆಯೂ ಒಂದು ಸೆಂಟಿಮೆಂಟ್ ಕಥಾಹಂದರವನ್ನು ಬಹಳ ನೈಜವಾಗಿ ನಿರ್ದೇಶಕರು ಸೆರೆ ಹಿಡಿದಿದ್ದಾರಂತೆ. ಈ ಚಿತ್ರದಲ್ಲಿ ನಾಯಕಿಯಾಗಿ ಶಾಲಿನಿ ನಟಿಸಿದ್ದಾರೆ. ಉಳಿದಂತೆ ಬುಲೆಟ್ ಪ್ರಕಾಶ್, ರಮೇಶ್‍ಭಟ್‍ರಂತಹ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದು, ಹಾಸ್ಯ ಹಾಗೂ ಫ್ಯಾಮಿಲಿ ಡ್ರಾಮದ ಎಳೆ ಸಾಗಲಿದೆಯಂತೆ. ಈ ಚಿತ್ರಕ್ಕೆ ಸತೀಶ್‍ಬಾಬು ಸಂಗೀತ ನೀಡಿದ್ದಾರೆ. ಶ್ರೀ ಮಂಜುನಾಥ ಮೇಘ ಮೂವಿ ಕ್ರಿಯೇಷನ್ಸ್ ಮೂಲಕ ಬಿಡುಗಡೆಗೊಳ್ಳುತ್ತಿರುವ ಈ ಚಿತ್ರವನ್ನು ಪ್ರೇಕ್ಷಕ ಮಹಾಪ್ರಭುಗಳು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin