ಮೋದಿಗೆ 9ನೇ ಪ್ರಶ್ನೆ ಕೇಳಿದ ವಿರುದ್ಧ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ನವದೆಹಲಿ, ಡಿ.7-ಪ್ರಶ್ನೆ ದಿನ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೃಷಿ ವಲಯ ಮತ್ತು ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿಗೆ 9ನೇ ಪ್ರಶ್ನೆ ಕೇಳಿದ್ದಾರೆ. ಸಾಲ ಮನ್ನಾ ಇಲ್ಲ, ರೈತರ ಬೆಳೆಗಳಿಗೆ ಬೆಂಬಲ ಬೆಲೆಯಾಗಲಿ ಅಥವಾ ಪ್ರೇರಕ ದರವಾಗಲಿ ಇಲ್ಲ. ಕೃಷಿಕರಿಗೆ ಬೆಳೆ ವಿಮಾನ ಪ್ರಯೋಜನಗಳು ಲಭಿಸುತ್ತಿಲ್ಲ. ಟ್ಯೂಬ್‍ವೆಲ್‍ಗಳನ್ನು ಅಳವಡಿಸಿಲ್ಲ.. ಇದೆಯೇ ನಿಮ್ಮ ಕೇಂದ್ರ ಸರ್ಕಾರದ ಸಾಧನೆ ಎಂದು ರಾಹುಲ್ ಟೀಕಿಸಿದ್ದಾರೆ.

ಗಬ್ಬರ್ ಸಿಂಗ್ ಪದ ಬಳಸಿ ಕೇಂದ್ರದ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸಿರುವ ರಾಹುಲ್. ಗಬ್ಬರ್ ಸಿಂಗ್ ಅಂಥವರಿಂದ ಅನ್ನದಾತರ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಕೂಲಿ ಕಾರ್ಮಿಕರ ಬಗ್ಗೆ ಮೋದಿ ಸಾಹೇಬರಿಗೆ ಮಲತಾಯಿ ಧೋರಣೆ ಏಕೋ ಗೊತ್ತಿಲ್ಲ. ಈ ಬಗ್ಗೆ ಅವರು ವಿವರಿಸಬೇಕೆಂದು ರಾಹುಲ್ ಒತ್ತಾಯಿಸಿದ್ದಾರೆ.

Facebook Comments

Sri Raghav

Admin