ಯಾವುದೇ ಭ್ರಷ್ಟಾಚಾರ ನಡೆದಿಲ್ಲ : ರಾಯರೆಡ್ಡಿ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Basavaraja-Rayareddy

ಬೆಂಗಳೂರು, ಡಿ.7- ವಿಶ್ವವಿದ್ಯಾನಿಲಯಗಳ ಅಂಕಪಟ್ಟಿ ಮತ್ತು ಪ್ರಮಾಣಪತ್ರ ಮುದ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಬಾಹಿರ ನಿರ್ಧಾರ ಕೈಗೊಂಡಿಲ್ಲ ಹಾಗೂ ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಇಂದಿಲ್ಲಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯಲ್ಲೂ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿಲ್ಲ. ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗಿಲ್ಲ. ಆ ರೀತಿ ಏನಾದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಬೊಕ್ಕಸಕ್ಕೆ ನಷ್ಟವಾಗಿದ್ದರೆ ತಾವು ಸಚಿವ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದರು.

ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್‍ಗೆ ಅಂಕಪಟ್ಟಿ ತಯಾರಿಕೆ ಗುತ್ತಿಗೆ ನೀಡಲಾಗಿದೆ. ಆದರೆ, ಈಗ ಎದುರಾಗಿರುವ ಆರೋಪಗಳ ಹಿಂದೆ ಗುತ್ತಿಗೆದಾರರ ಕೈವಾಡವಿದ್ದರೂ ಇರಬಹುದು. ಆರು ವಿಶ್ವವಿದ್ಯಾನಿಲಯಗಳು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಸೀಕ್ರೆಟ್ ಕೋಡ್‍ಗಳನ್ನು ನೀಡಿ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ಮುದ್ರಿಸಿಕೊಳ್ಳುತ್ತವೆ. ಇದರ ದರ ನಿಗದಿಯನ್ನು ಸರ್ಕಾರ ಮಾಡಿರುವುದಿಲ್ಲ. ವಿವಿಗಳು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಇಂತಿಂಥ ಕಾಗದಕ್ಕೆ ಇಂತಿಷ್ಟು ಎಂಬ ಬೆಲೆ ಅನುಸರಿಸಿ ದರ ನಿಗದಿ ಮಾಡುತ್ತವೆ. ಅದರಲ್ಲಿ 18.50ರೂ.ನಿಂದ 36.56ರೂ.ವರೆಗಿನ ದರದಲ್ಲಿ ಎಂಎಸ್‍ಐಎಲ್, ಜಿಎಸ್‍ಎಂ ಕಾಗದಗಳನ್ನು ಸರಬರಾಜು ಮಾಡುತ್ತಿವೆ ಎಂದು ಮಾಹಿತಿ ನೀಡಿದರು.

Facebook Comments

Sri Raghav

Admin