ಸಾವಿನ್ಲಲಿ ಅಂತ್ಯವಾದ ಎಣ್ಣೆ ಪಾರ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Party--02

ಬೆಂಗಳೂರು,ಡಿ.7- ಮೂವರು ಸ್ನೇಹಿತರು ಸೇರಿ ಪಾರ್ಟಿ ಮಾಡುತ್ತಿದ್ದಾಗ ಇಬ್ಬರ ನಡುವೆ ನಡೆದ ಜಗಳ ಪೊಲೀಸ್ ಇಲಾಖೆ ಉದ್ಯೋಗಿಯೊಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ನಂದಿನಿಲೇಔಟ್ ಪೊಲೀಸ್ ಕ್ವಾಟ್ರರ್ಸ್‍ನಲ್ಲಿ ನಡೆದಿದೆ. ಮೂಲತಃ ಮಂಡ್ಯದ ಉದಯ್‍ಕುಮಾರ್(34) ಕೊಲೆಯಾದ ದುರ್ದೈವಿ. ಪೊಲೀಸ್ ಪ್ರಧಾನ ಕಚೇರಿಯಲ್ಲಿ ಎಫ್‍ಡಿಎ ಆಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ನೇಹಿತರಾದ ವಿಠ್ಠಲ್ ಪೊಲೀಸ್ ಇಲಾಖೆಯಲ್ಲಿ ದಳಾಯತು ಆಗಿದ್ದು , ರಾಜು ಆರೋಗ್ಯ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದಾರೆ.

ವಿಠ್ಠಲ್ ಅವರು ನಂದಿನಿ ಲೇಔಟ್‍ನ ಪೊಲೀಸ್ ಕ್ವಾಟ್ರರ್ಸ್‍ನ ಮೊದಲ ಮಹಡಿಯಲ್ಲಿ ವಾಸವಾಗಿದ್ದು ಇವರೊಂದಿಗೆ ರಾಜು ಸಹ ಇದ್ದರು. ಉದಯ್‍ಕುಮಾರ್‍ಗೆ ವಸತಿಗೃಹವೊಂದು ಬೇಕಾಗಿದ್ದರಿಂದ ನಂದಿನಿ ಲೇಔಟ್ ಕ್ವಾಟ್ರರ್ಸ್‍ನಲ್ಲಿ ಮನೆ ಖಾಲಿ ಇದೆಯೇ ಎಂಬುದನ್ನು ನೋಡಲು ವಿಠ್ಠಲ್ ಅವರ ಮನೆಗೆ ಬಂದಿದ್ದರು. ವಿಠ್ಠಲ್ ಮನೆಗೆ ಉದಯ್ ಬಂದಿದ್ದಾಗ ಇವರ ಮನೆಯಲ್ಲಿದ್ದ ರಾಜು ಸೇರಿ ಈ ಮೂವರು ಪಾರ್ಟಿ ಮಾಡಿದ್ದಾರೆ. ರಾತ್ರಿ 11 ಗಂಟೆ ಸಂದರ್ಭದಲ್ಲಿ ವಿಠ್ಠಲ್ ಮನೆಯಲ್ಲಿ ಉಳಿದುಕೊಳ್ಳುವ ವಿಚಾರವಾಗಿ ಉದಯ್ ಹಾಗೂ ರಾಜು ನಡುವೆ ಜಗಳ ನಡೆದಿದೆ.

ಮದ್ಯದ ಅಮಲಿನಲ್ಲಿದ್ದ ಈ ಇಬ್ಬರ ಜಗಳ ವಿಕೋಪಕ್ಕೆ ತಿರುಗಿದಾಗ ಒಂದು ಹಂತದಲ್ಲಿ ಉದಯ್‍ನನ್ನು ರಾಜು ತಳ್ಳಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಉದಯ್ ಆಯತಪ್ಪಿ 14 ಅಡಿಯಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದೆ. ತಕ್ಷಣ ಇವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾ ಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಈ ವಿಷಯ ತಿಳಿದ ಉದಯ್ ಅವರ ಪತ್ನಿ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು , ಪಾರ್ಟಿ ವೇಳೆ ಜಗಳ ಮಾಡಿ ನನ್ನ ಗಂಡನನ್ನು ಒಂದನೇ ಮಹಡಿಯಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ನಂದಿಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ. ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜುನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

Facebook Comments

Sri Raghav

Admin