5 ಅಂಬೇಡ್ಕರ್ ಯಾತ್ರಾ ಸ್ಥಳಗಳ ಅಭಿವೃದ್ಧಿ : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Ambekar--02

ನವದೆಹಲಿ, ಡಿ.7-ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಕೇಂದ್ರ ಸರ್ಕಾರ ಯಾತ್ರಾ ತಾಣಗಳಾಗಿ ಅಭಿವೃದ್ದಿಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ದೆಹಲಿ, ಮುಂಬೈ, ನಾಗ್ಪುರ, ಮೋಹೌ ಮತ್ತು ಇಂಗ್ಲೆಂಡ್ ಅಂಬೇಡ್ಕರ್ ಅವರಿಗೆ ಸಂಬಂಧಪಟ್ಟ ಯಾತ್ರಾ ಸ್ಥಳಗಳಂತಿವೆ ಎಂದು ಅವರು ತಿಳಿಸಿದರು.

ದೆಹಲಿಯಲ್ಲಿ ಇಂದು ಬಿ.ಆರ್.ಅಂಬೇಡ್ಕರ್ ಇಂಟರ್‍ನ್ಯಾಷನಲ್ ಸೆಂಟರ್‍ನನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಕುರಿತ ಸಂಶೋಧನೆಗೆ ಇದು ಮುಖ್ಯ ಸ್ಥಳವಾಗಲಿದೆ. ಅಂಬೇಡ್ಕರ್ ಅವರ ತತ್ವ-ಆದರ್ಶಗಳು ಮತ್ತು ಚಿಂತನೆ-ಬೋಧನೆಗಳ ಪ್ರವರ್ತನೆಗೆ ಇದು ಪ್ರೇರಣೆಯಾಗಲಿದೆ ಎಂದರು. ಪ್ರಧಾನಿ ಇದೇ ಸಂದರ್ಭದಲ್ಲಿ ದಲಿತ ಧುರೀಣರ ಪುತ್ಥಳಿಗಳನ್ನು ಜನ್‍ಪಥ್‍ನಲ್ಲಿ ಅನಾವರಣಗೊಳಿಸಿದರು. ಕೇಂದ್ರ ಸಚಿವರಾದ ತಾವರ್‍ಚಂದ್ ಗೆಲ್ಹೋಟ್, ರಾಮ್‍ದಾಸ್ ಅತವಾಳೆ, ವಿಜಯ್ ಗೋಯೆಲ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments

Sri Raghav

Admin