8 ಪಾಕ್ ಪ್ರಜೆಗಳಿಗೆ ಮೆಡಿಕಲ್ ವೀಸಾ ಕರುಣಿಸಿದ ಸುಷ್ಮಾ

ಈ ಸುದ್ದಿಯನ್ನು ಶೇರ್ ಮಾಡಿ

Sushma--Swaraj--02

ನವದೆಹಲಿ, ಡಿ.7-ಪಾಕಿಸ್ತಾನದ ಎಂಟು ಮಂದಿಗೆ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಮೆಡಿಕಲ್ ವೀಸಾ ಮಂಜೂರು ಮಾಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ. ವೈದ್ಯಕೀಯ ವೀಸಾ ನೀಡುವಂತೆ ಕೋರಿ ಪಾಕ್ ಪ್ರಜೆಗಳು ಮಾಡಿರುವ ಮನವಿಗೆ ಟ್ವೀಟರ್‍ನಲ್ಲಿ ಸ್ಪಂದಿಸಿರುವ ಸುಷ್ಮಾ ಅವರ ಹೆಸರುಗಳನ್ನು ಪ್ರಕಟಿಸಿದ್ದಾರೆ.

ಪಾಕಿಸ್ತಾನಿ ಪ್ರಜೆಗಳಾದ ಶಹಬಾರ್ ಬೀಬಿ, ಝಹಿರುದ್ಧೀನ್ ಬಾಬರ್, ವಜೀರ್ ಖಾನ್, ಇರ್ಫಾನ್ ಅಲಿ ಚಂಡಿಯೋ ಎಂಬುವರು ಚಿಕಿತ್ಸೆಗಾಗಿ ಭಾರತಕ್ಕೆ ಬರಲು ಮೆಡಿಕಲ್ ವೀಸಾ ಮಂಜೂರು ಮಾಡಿದ್ದೇವೆ. ಈ ಸಂಬಂಧ ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈ ಕಮಿಷನರ್ ಅವರನ್ನು ಸಂಪರ್ಕಿಸಿ ಎಂದು ಸುಷ್ಮಾ ಟ್ವೀಟಿಸಿದ್ದಾರೆ.  ಮಿರ್ ಮಹಮದ್ ಶಾಹಿದ್, ನಿಖಿಲ್ ರಾಜ್, ಜಾಫರುಲ್ಲಾ ಹಾಗೂ ಜಮಾತ್ ಮಲ್ ಎಂಬುವರಿಗೂ ವೈದ್ಯಕೀಯ ವೀಸಾ ದೊರೆತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Facebook Comments

Sri Raghav

Admin