ಅಕ್ರಮ ಮದ್ಯ ದಂಧೆ ಬಗ್ಗೆ ದೂರು ನೀಡಿದ್ದಕ್ಕೆ ಮಹಿಳೆಯರೇ ಬೆತ್ತಲೆ ಮೆರವಣಿಗೆ ಮಾಡಿದರು..!

ಈ ಸುದ್ದಿಯನ್ನು ಶೇರ್ ಮಾಡಿ

Women--02

ನವದೆಹಲಿ, ಡಿ.8-ದೆಹಲಿ ಹೊರವಲಯದ ನರೇಲಾದಲ್ಲಿ ಅಕ್ರಮ ಮದ್ಯ ದಂಧೆ ಬಗ್ಗೆ ಪೊಲೀಸರು ಮತ್ತು ದೆಹಲಿ ಮಹಿಳಾ ಆಯೋಗಕ್ಕೆ(ಡಿಸಿಡಬ್ಲ್ಯು) ದೂರು ನೀಡಿದಾಕೆ ಮೇಲೆ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿ ಬಟ್ಟೆ ಹರಿದು ನಗ್ನ ಮೆರವಣಿಗೆ ನಡೆಸಿದ ಆರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಲ್, ನರೇಲಾ ಘಟನೆಗೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿನ್ನೆ ಸಂಜೆ ಪೊಲೀಸರಿಗೆ ತಿಳಿಸಲಾಗಿತ್ತು. ಆರು ಮಂದಿಯನ್ನು ಬಂಧಿಸಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ನರೇಲಾ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಬಗ್ಗೆ ಆ ಮಹಿಳೆ ಬುಧವಾರ ರಾತ್ರಿ ಪೊಲೀಸರು ಮತ್ತು ಆಯೋಗಕ್ಕೆ ಮಾಹಿತಿ ನೀಡಿದ್ದರು ಎಂದು ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಳ್ ತಿಳಿಸಿದ್ದಾರೆ.

ಮಹಿಳೆಯರೂ ಸೇರಿದಂತೆ 25 ಜನರ ಗುಂಪೊಂದು ನಿನ್ನೆ ಈಕೆ ಮೇಲೆ ಕಬ್ಬಿಣದ ಸರಳುಗಳಿಂದ ದಾಳಿ ನಡೆಸಿ ಆಕೆಯ ಬಟ್ಟೆಯನ್ನು ಹರಿದು ಹಾಕಿ ಆ ಪ್ರದೇಶದಲ್ಲಿ ಬೆತ್ತಲೆ ಮೆರವಣಿಗೆ ಮಾಡಿತು. ಅಲ್ಲದೇ ದುಷ್ಕರ್ಮಿಗಳು ಇಡೀ ದೃಶ್ಯವನ್ನು ಚಿತ್ರೀಕರಿಸಿ ಆ ಪ್ರದೇಶದ ಇತರರೊಂದಿಗೆ ವಿನಿಮಯ ಮಾಡಿಕೊಂಡಿದ್ದರು.

Facebook Comments

Sri Raghav

Admin