ಈ ಗಜರಾಜನ ಭಕ್ತಿಗೆ ಅಚ್ಚರಿಗೊಂಡ ಗೋಪಾಲಸ್ವಾಮಿ ಭಕ್ತರು..!

ಈ ಸುದ್ದಿಯನ್ನು ಶೇರ್ ಮಾಡಿ

Elephant--02

ಹಿಮವದ್‍ ಗೋಪಾಲಸ್ವಾಮಿ ಬೆಟ್ಟ, ಡಿ.8- ಈ ಗಜರಾಜನಿಗೆ ಬೆಟ್ಟದ ಮೇಲಿರುವ ಹಿಮವದ್ ಗೋಪಾಲಸ್ವಾಮಿ ಮೇಲೆ ಎಲ್ಲಿಲ್ಲದ ಭಕ್ತಿ. ಪ್ರತಿದಿನ ಬಂದು ಗೋಪಾಲಸ್ವಾಮಿ ದೇವಾಲಯದ ಸುತ್ತ ಸುತ್ತಿ ಪ್ರಸಾದ ಸ್ವೀಕರಿಸಿ ತನ್ನ ಭಕ್ತಿಯನ್ನು ಸಮರ್ಪಿಸುತ್ತಾನೆ. ಬಹುದಿನಗಳಿಂದ ಗೋಪಾಲ ಎಂಬ ಗಜರಾಜ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹತ್ತಿ ಸ್ವಾಮಿಯ ಸುತ್ತ ಸುತ್ತಿ ತನ್ನ ಭಕ್ತಿ ಸಮರ್ಪಿಸುತ್ತಿರುವುದು ಭಕ್ತರ ಸಮೂಹದಲ್ಲಿ ಆಶ್ಚರ್ಯ ಮೂಡಿಸಿದೆ. ಚಾಮರಾಜನಗರ ಜಿಲ್ಲೆ ಬಂಡಿಪುರ ನ್ಯಾಷನಲ್ ಪಾರ್ಕ್‍ನಲ್ಲಿರುವ ಈ ಆನೆ ಬಹು ದಿನಗಳಿಂದ ಈ ಸೇವೆಯನ್ನು ಸಲ್ಲಿಸುತ್ತಿದೆ. ಇದೇನು ದೇವಾಲಯದ ಆನೆಯಲ್ಲ. ಸಾಮಾನ್ಯವಾಗಿ ಪುರಾಣ ಪ್ರಸಿದ್ಧ ಪ್ರಾಚೀನ ದೇವಾಲಯಗಳಲ್ಲಿ ಆನೆಗಳನ್ನು ಸಾಕಿರುತ್ತಾರೆ. ಆ ಆನೆಗಳು ದೇವಾಲಯದ ಮುಂದೆ ನಿಂತಿರುತ್ತವೆ. ದೇವಾಲಯ ಸುತ್ತುವುದು, ಪ್ರಸಾದ ಸ್ವೀಕರಿಸುವುದು ವಾಡಿಕೆಯಾಗಿರುತ್ತದೆ.

ಆದರೆ, ಈ ಗಜರಾಜ ನ್ಯಾಷನಲ್ ಪಾರ್ಕ್‍ನಿಂದ ತನ್ನ ಮಾವುತನ ಜತೆ ಹೊರಟು ಹಿಮವದ್ ಗೋಪಾಲಸ್ವಾಮಿ ಬೆಟ್ಟ ತಲುಪಿ ಸ್ವಾಮಿಯ ದೇವಾಲಯದ ಸುತ್ತ ಸುತ್ತಿ ತನ್ನ ಸೊಂಡಿಲನ್ನು ಎತ್ತಿ ಸ್ವಾಮಿಗೆ ನಮಿಸಿ, ಪ್ರಸಾದ ಸ್ವೀಕರಿಸಿ ಮತ್ತೆ ತನ್ನ ಜಾಗಕ್ಕೆ ಹಿಂದಿರುಗುತ್ತಾನೆ. ಈ ಗಜರಾಜನ ಸೇವೆಗೆ ಅಲ್ಲಿನ ಅರ್ಚಕರು, ಪ್ರತಿದಿನ ದೇವಸ್ಥಾನಕ್ಕೆ ಬರುವ ಭಕ್ತರು ಮನಸೋತಿದ್ದಾರೆ. ಯಾರು ದೇವಸ್ಥಾನಕ್ಕೆ ಬರುವುದು ತಪ್ಪಿದರೂ ಗಜರಾಜ ಮಾತ್ರ ತಪ್ಪುವುದಿಲ್ಲ. ಪ್ರತಿದಿನ ಬೆಳಗಿನ ಜಾವ 4.30ಕ್ಕೆ ಹಾಜರಾಗುತ್ತಾನೆ. ದೇವರಿಗೆ ತನ್ನ ಸೇವೆ ಸಲ್ಲಿಸುತ್ತಾನೆ.

ಏಕಾಏಕಿ ಆನೆಯೊಂದು ಮಾವುತನ ರಹಿತವಾಗಿ ಬಂದರೆ ಭಯವಾಗುವುದಿಲ್ಲವೆ ಎಂದು ಇಲ್ಲಿನ ಅರ್ಚಕರನ್ನು ಕೇಳಿದರೆ ಅವರು ನಿರ್ಭಯವಾಗಿ ಮಾತನಾಡುತ್ತಾರೆ. ಆನೆ ಪ್ರತಿದಿನ ತನ್ನ ಪಾಡಿಗೆ ತಾನು ಬಂದು ದೇವಸ್ಥಾನವನ್ನು ಸುತ್ತಿ ನಾವು ಕೊಡುವ ಪ್ರಸಾದ ಸ್ವೀಕರಿಸಿ ಹೊರಟು ಹೋಗುತ್ತದೆ. ಯಾರಿಗೂ ಯಾವುದೇ ತೊಂದರೆ ಕೊಡುವುದಿಲ್ಲ. ಅದಕ್ಕಾಗಿ ಯಾರೂ ಕೂಡ ಭಯ ಪಡುವುದಿಲ್ಲ ಎನ್ನುತ್ತಾರೆ.

Facebook Comments

Sri Raghav

Admin