ಕುಕ್ಕರಳ್ಳಿ ಕೆರೆಯಲ್ಲಿ ಸಾವನ್ನಪ್ಪಿದ ಪಕ್ಷಿ ಭೂಪಾಲ್‍ನ ಪ್ರಯೋಗಾಲಯಕ್ಕೆ ರವಾನೆ

ಈ ಸುದ್ದಿಯನ್ನು ಶೇರ್ ಮಾಡಿ

Kukkarahalli--02

ಮೈಸೂರು,ಡಿ.8- ನಗರದ ಕುಕ್ಕರಳ್ಳಿ ಕೆರೆಯಲ್ಲಿ ಅಸ್ವಸ್ಥಗೊಂಡಿದ್ದ ಎರಡು ಪೆಲಿಕಾನ್ ಪಕ್ಷಿಗಳ ಪೈಕಿ ಒಂದು ಸಾವನ್ನಪ್ಪಿದ್ದು, ಮೃತಪಟ್ಟಿರುವ ಹಕ್ಕಿಯನ್ನು ಭೂಪಾಲ್‍ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೊನ್ನೆ ಪರಿಸರ ಪ್ರೇಮಿ ಜಯರಾಮ್ ಎಂಬುವರು ಕುಕ್ಕರಹಳ್ಳಿ ಕೆರೆಗೆ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭ ಎರಡು ಪೆಲಿಕಾನ್ ಹಕ್ಕಿಗಳು ಅಸ್ವಸ್ಥಗೊಂಡಿದ್ದವು. ಪಶುವೈದ್ಯರು ಅವುಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಎರಡು ಪಕ್ಷಿಗಳ ಪೈಕಿ ಒಂದು ಹಕ್ಕಿ ನಿನ್ನೆ ಸಂಜೆ ಸಾವನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಡಿಸಿಎಫ್ ಈ ಬಗ್ಗೆ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿ, ವಿವಿಧ ಜಾತಿಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಪೆಲಿಕಾನ್ ಪಕ್ಷಿ ಬಿಟ್ಟರೆ ಇನ್ಯಾವುದೇ ಪಕ್ಷಿಗಳು ಸಾವನ್ನಪ್ಪಿಲ್ಲ ಎಂದರು.

ಮೃತಪಟ್ಟಿರುವ ಪಕ್ಷಿಯನ್ನು ಭೂಪಾಲ್‍ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಎರಡು ಪಕ್ಷಿಗಳಿಗೆ ಹಕ್ಕಿಜ್ವರ ಇತ್ತು ಎಂಬುದು ದೃಢಪಟ್ಟಿಲ್ಲ ವರದಿ ಬಂದ ನಂತರವೇ ತಿಳಿಯಲಿದೆ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಕುಕ್ಕರಹಳ್ಳಿ ಕೆರೆಯಲ್ಲಿ 20 ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿವೆ ಎಂಬಂತೆ ವಿಡಿಯೋ ಹರಿಬಿಡಲಾಗಿದೆ. ಯಾರು ಈ ರೀತಿ ವಿಡಿಯೋ ಬಿಟ್ಟಿದ್ದಾರೆ ಎಂಬುದನ್ನು ಪತ್ತೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Facebook Comments

Sri Raghav

Admin