ಖಾಸಗಿ ಕಂಪನಿಯ ಮಹಿಳಾ ಉದೋಗಿ ಪಿಜಿಯಲ್ಲಿ ನೇಣಿಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

mt-su-fin

ಮೈಸೂರು,ಡಿ.8- ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಡೆತ್‍ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಘಟನೆ ಇಂದು ನಗರದಲ್ಲಿ ನಡೆದಿದೆ. ಕೊಳ್ಳೆಗಾಲ ತಾಲ್ಲೂಕಿನ ಶಂಕರಾಪುರದ ಲಿಂಗರಾಜು ಅವರ ಪುತ್ರಿ ಸುನಂದ(25) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಈಕೆ ನಗರದ ಹೆಬ್ಬಾಳದಲ್ಲಿರುವ ಸ್ಪೈ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಮಹದೇಶ್ವರ ಬಡಾವಣೆಯಲ್ಲಿರುವ ಪಿಜಿಯೊಂದರಲ್ಲಿ ವಾಸವಿದ್ದಳು. ರಾತ್ರಿ ಕೆಲಸ ಮುಗಿಸಿ ಊಟ ಮಾಡಿ ಮಲಗಿದ್ದಳು. ಬೆಳಗ್ಗೆ ಬಹಳ ಹೊತ್ತಾದರೂ ಆಕೆ ಎದ್ದಿರಲಿಲ್ಲ. ಹಾಗಾಗಿ ಇತರ ಯುವತಿಯರು ರೂಮಿಗೆ ಹೋಗಿ ನೋಡಿದಾಗ ನೇಣು ಹಾಕಿಕೊಂಡು ಸಾವನ್ನಪ್ಪಿರುವುದು ಗೊತ್ತಾಗಿದೆ.

ವಿಜಯನಗರ ಠಾಣೆ ಪೊಲೀಸರು ಪಿಜಿಗೆ ಬಂದು ಪರಿಶೀಲಿಸಿದಾಗ ಡೆತ್‍ನೋಟ್ ಸಿಕ್ಕಿದೆ. ಅದರಲ್ಲಿ ಬೇಬಿ ಐ ಲವ್ ಯು, ಐ ಮಿಸ್ ಯು ಎಂದು ಬರೆದಿದೆ. ತಂದೆಗೆ ಆರೋಗ್ಯ ಸರಿಯಿಲ್ಲ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದಿದ್ದಾಳೆ. ಪ್ರೇಮ ವೈಫಲ್ಯದಿಂದ ಸುನಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments