ನೇಪಾಳ ಚುನಾವಣೆ : 3 ಸಂಸತ್ ಕ್ಷೇತ್ರಗಳಲ್ಲಿ ಎಡ ಮೈತ್ರಿಕೂಟ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

Nepal--02

ಕಠ್ಮಂಡು, ಡಿ.9-ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ನಡೆದ ಪ್ರಾಂತೀಯ ಮತ್ತು ಸಂಸದೀಯ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಎಡ ಮೈತ್ರಿಪಕ್ಷಗಳು ಮೂರು ಸಂಸದೀಯ ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ. ವಿರೋಧಪಕ್ಷ ಸಿಪಿಎನ್-ಯುಎಂಎಲ್ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದರೆ. ಅದರ ಮಿತ್ರ ಪಕ್ಷವಾದ ಸಿಪಿಎನ್-ಮಾವೋಯಿಸ್ಟ್ ಸೆಂಟರ್, ನೇಪಾಳಿ ಕಾಂಗ್ರೆಸ್‍ನನ್ನು ಮಣಿಸಿ ಜಯಗಳಿಸಿದೆ. ಗುರುವಾರ ಎರಡನೇ ಹಂತದ ಮತದಾನ ಭಾರೀ ಬಂದೋಬಸ್ತ್ ನಡುವೆ ನಡೆದಿದ್ದರೂ, ಎರಡು ಕಡೆ ಬಾಂಬ್ ಸ್ಫೋಟ ಸಂಭವಿಸಿತ್ತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಲಿಲ್ಲ.

ವಿಶ್ವದ ಏಕೈಕ ಸಂಪೂರ್ಣ ಹಿಂದೂ ರಾಷ್ಟ್ರವಾಗಿರುವ ನೇಪಾಳದ 45 ಜಿಲ್ಲೆಗಳಲ್ಲಿ ನ.7ರಂದುಬೆಳಗ್ಗೆಯಿಂದಲೇ ಚುರುಕಿನ ಮತದಾನ ನಡೆದಿತ್ತು. ಎರಡನೇ ಹಂತದ ಮತದಾನಕ್ಕಾಗಿ 12.2 ದಶಲಕ್ಷ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸುವ ಅಧಿಕಾರ ಪಡೆದಿದ್ದರು. 45 ಜಿಲ್ಲೆಗಳ 128 ಸಂಸದೀಯ ಕ್ಷೇತ್ರಗಳು ಹಾಗೂ 256 ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಪ್ರಧಾನಮಂತ್ರಿ ಶೇರ್ ಬಹದ್ದೂರ್ ದೇವುಬಾ ಸೇರಿದಂತೆ ಒಟ್ಟು 4,482 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದೆ. ನೇಪಾಳದಲ್ಲಿ 2015ರಲ್ಲಿ ಹೊಸ ಸಂವಿಧಾನ ಜÁರಿಗೆ ಬಂದ ನಂತರ ಮೊದಲ ಬಾರಿ ಈ ಚುನಾವಣೆ ನಡೆಯುತ್ತಿದೆ.

Facebook Comments

Sri Raghav

Admin