ಮೋದಿಗೆ 10ನೇ ಪ್ರಶ್ನೆ ಕೇಳಿದ ರಾಹುಲ್

Modi-vs-Rahul

ನವದೆಹಲಿ, ಡಿ.9-ಪ್ರಶ್ನೆ ದಿನ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಗುಜರಾತಿನ ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಮೀಸಲಾದ 55,000 ಕೋಟಿ ರೂ. ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಬುಡಕಟ್ಟು ಸಮುದಾಯದ ಜನರ ಸಮಸ್ಯೆಗಳು ಮತ್ತು ದುಸ್ಥಿತಿ ಬಗ್ಗೆ ರಾಹುಲ್ ಪ್ರಧಾನಿಗೆ 10ನೇ ಪ್ರಶ್ನೆ ಕೇಳಿದ್ದಾರೆ.

ವಲಸೆಯಿಂದ ಬುಡಕಟ್ಟು ಜನರು ಅತಂತ್ರರಾಗಿದ್ದಾರೆ. ಮೋದಿ ಅವರ ವನಬಂಧು ಯೋಜನೆಯ 55,000 ಕೋಟಿ ರೂ.ಗಳು ಎಲ್ಲಿ ಹೋಯಿತು ಎಂದು ರಾಜೀವ್ ಉತ್ತರ ಬಯಸಿದ್ದಾರೆ. ರೈತರ ದುರವಸ್ಥೆಗೆ ಸಂಬಂಧಿಸಿದಂತೆ ರಾಹುಲ್ ನಿನ್ನೆ ತಮ್ಮ 9ನೇ ಪ್ರಶ್ನೆಯನ್ನು ಕೇಳಿದ್ದರು. ಸಾಲ ಮನ್ನಾ ಇಲ್ಲ, ರೈತರ ಬೆಳೆಗಳಿಗೆ ಬೆಂಬಲ ಬೆಲೆಯಾಗಲಿ ಅಥವಾ ಪ್ರೇರಕ ದರವಾಗಲಿ ಇಲ್ಲ. ಕೃಷಿಕರಿಗೆ ಬೆಳೆ ವಿಮಾನ ಪ್ರಯೋಜನಗಳು ಲಭಿಸುತ್ತಿಲ್ಲ. ಟ್ಯೂಬ್‍ವೆಲ್‍ಗಳನ್ನು ಅಳವಡಿಸಿಲ್ಲ.. ಇದೆಯೇ ನಿಮ್ಮ ಕೇಂದ್ರ ಸರ್ಕಾರದ ಸಾಧನೆ ಎಂದು ರಾಹುಲ್ ಟೀಕಿಸಿದ್ದರು.

Facebook Comments

Sri Raghav

Admin