ಮೋದಿಗೆ 10 ಪ್ರಶ್ನೆ ಕೇಳಿದ್ದೇನೆ, ಒಂದಕ್ಕೂ ಉತ್ತರಿಸಿಲ್ಲ : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ನವದೆಹಲಿ, ಡಿ.9-ದೇಶದ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ನಾನು ಈವರೆಗೆ ಪ್ರಧಾನಿಯವರಿಗೆ 10 ಪ್ರಶ್ನೆಗಳನ್ನು ಕೇಳಿದ್ದೇನೆ. ಇನ್ನೂ ಒಂದಕ್ಕೂ ಉತ್ತರ ನೀಡಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿನಕ್ಕೊಂದು ಪ್ರಶ್ನೆ ಅಭಿಯಾನದಲ್ಲಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ರಾಹುಲ್ ಇಂದು ಸಹ ಪ್ರಶ್ನೆ ಮೂಲಕ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಗುಜರಾತ್ ವಿಧಾನಸಭೈ ಚುನಾವಣೆ ಪ್ರಚಾರದ ವೇಳೆ ತಮ್ಮ ಭಾಷಣಗಳಲ್ಲಿ ಅವರಿ ಅಭಿವೃದ್ಧಿ ವಿಷಯಗಳನ್ನು ಏಕೆ ಪ್ರಶ್ನಿಸಿಲ್ಲ ಎಂದು ಉತ್ತರ ಬಯಸಿದರು. ಬಿಜೆಪಿ ಸರ್ಕಾರವು ಗುಜರಾತ್‍ನಲ್ಲಿ 22 ವರ್ಷಗಳ ಆಡಳಿತ ನಡೆಸಿದ್ದರೂ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಅಲ್ಲದೇ ಪ್ರಧಾನಿ ತಮ್ಮ ಭಾಷಣದಲ್ಲಿ ಆ ಬಗ್ಗೆ ಪ್ರಸ್ತಾಪಿಸದೇ ಇರುವುದು ಅಚ್ಚರಿ ಮೂಡಿಸಿದೆ ಎಂದು ರಾಹುಲ್ ಹೇಳಿದರು.

Facebook Comments

Sri Raghav

Admin