ಅಗಲಿದ ಹಿರಿಯ ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅವರಿಗೆ ನುಡಿನಮನ

ಈ ಸುದ್ದಿಯನ್ನು ಶೇರ್ ಮಾಡಿ

press

ಸಮಾನ ಮನಸ್ಕರ ಬಳಗ ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಹಮ್ಮಿಕೊಂಡಿದ್ದ ಅಗಲಿದ ಹಿರಿಯ ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅವರಿಗೆ ನುಡಿನಮನ ಸಮಾರಂಭದಲ್ಲಿ ಈ ಸಂಜೆ ಸಂಪಾದಕರಾದ ಟಿ.ವೆಂಕಟೇಶ್ ರವರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನವಟ್ಟು, ಖ್ಯಾತ ನಿರ್ದೇಶಕರಾದ ಟಿ.ಎನ್.ಸೀತಾರಾಮ್, ಹಿರಿಯ ಪತ್ರಕರ್ತರಾದ ಆರ್.ಟಿ. ವಿಠ್ಠಲಮೂರ್ತಿ , ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾದ ಕಿರಣ ಹೆಚ್.ವಿ , ಪ್ರಜಾಪ್ರಗತಿ ಸಂಪಾದಕರಾದ ನಾಗಣ್ಣ ಸೇರಿದಂತೆ ಹಲವಾರು ಹಿರಿಯ ಪತ್ರಕರ್ತರುಗಳು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟುಹಿರಿಯ ಪತ್ರಕರ್ತ ಹಾಗೂ ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಒಂದು ವಿಶ್ವವಿದ್ಯಾಲದಂತೆ ಕಾರ್ಯನಿರ್ವಹಿಸಿದ್ದು, ಅವರ ಶಿಷ್ಯ ಪರಂಪರೆ ನಾಡಿನೆಲ್ಲೆಡೆ ಪಸರಿಸಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಸಮಾನಮನಸ್ಕರ ಮಾಧ್ಯಮ ಬಳಗ ಆಯೋಜಿಸಿದ್ದ  ರಾಜಶೇಖರ ಕೋಟಿ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋಟಿ ನಿಧನದ ನಂತರವೂ ಬೆಳೆಯುತ್ತಿರುವ ಅಪರೂಪದ ಪ್ರತಿಭೆ. ಅವರ ಪ್ರಭೆ ಎಲ್ಲೆಡೆ ಪಸರಿಸಿದೆ. ಅವರ ಶಿಷ್ಯ ಕೋಟಿ ಬಹಳ ದೊಡ್ಡದಾಗಿದೆ. ಅವರ ಸಾಧನೆಯ ಹಾದಿಯ ಕಾರ್ಯಕ್ರಮ ಮತ್ತಷ್ಟು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

WhatsApp Image 2017-12-09 at 6.48.21 PM

ಈಗಿನ ಪತ್ರಿಕೋದ್ಯಮದಲ್ಲಿ ಗ್ರಾಹಕರು ಹಾಗೂ ಜಾಹೀರಾತು ಮುಖ್ಯವಾಗಿದೆ. ಆಧುನಿಕ ಹಾಗೂ ಜಾಗತೀಕರಣದಿಂದ ನಡುವೆಯೂ ಕೋಟಿ ಬೆಳೆದು ನಿಂತರು. ಅವರ ಬದುಕಿನ ಯಾನ ಇಂದಿನವರಲ್ಲಿ ಕಂಡುಬರುತ್ತಿಲ್ಲ. ಅವರು ಸದಾ ಅಪ್ ಡೇಟ್ ಆಗುತ್ತಿದ್ದ ಪತ್ರಕರ್ತ.  ತಂತ್ರಜ್ಣಾನ ಹಾಗೂ ಇನ್ನಿತರ ವಿಚಾರದಲ್ಲೂ ಅವರು ಹಿಂದುಳಿದಿರಲಿಲ್ಲ. ಅವರ ಹಿಂದೆ ಯಾವುದೇ ಪ್ರಭಾವಳಿ ಇರಲಿಲ್ಲ. ಸೈದ್ದಾಂತಿಕ ಭಿನ್ನಾಭಿಪ್ರಾಯವಿದ್ದರೂ ಯಾರನ್ನೂ ಅವರು ದ್ವೇಷಿಸುತ್ತಿರಲಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಸ್ಮರಿಸಿದರು.

ಭವಿಷ್ಯದ ಬಗ್ಗೆ ಹಾಗೂ ಹೊಸ ತಲೆಮಾರಿನ ಪತ್ರಕರ್ತರ ಬಗ್ಗೆ ಭರವಸೆ ಇತ್ತು. ಕಿರಿಯರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು. ಕೋಟಿ ಅವರ ಅಗಲಿಕೆ ಮಾಧ್ಯಮ ಕ್ಷೇತ್ರಕ್ಕೆ ನಷ್ಟವಾಗಿದೆ. ಇಂತಹ ತಲೆಮಾರಿನ ಮಾಧ್ಯಮ ದಿಗ್ಗಜರನ್ನು ಮುಂದೆ ಕಾಣಲಾಗದು. ಕೋಟಿ ಅವರು ಪತ್ರಿಕೆ ಬದಲು ಬೇರೆ ಯಾವುದಾದರೂ ವ್ಯವಹಾರ ಮಾಡಿದ್ದರೆ ಇನ್ನೂ ಹತ್ತು ವರ್ಷ ಹೆಚ್ಚು ಬದುಕುತಿದ್ದರು. ಪತ್ರಿಕೋದ್ಯಮ ಅವರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಕೋಟಿ ಯಾವುದೇ ಶಕ್ತಿಗೆ ಬಗ್ಗುತ್ತಿರಲಿಲ್ಲ. ಅವರ ಆದರ್ಶ ಎಂದೆಂದಿಗೂ ಇರುತ್ತದೆ. ಅವರು ಉನ್ನತ  ಪರಂಪರೆಗೆ ನಾಂದಿಹಾಡಿದ್ದಾರೆ ಎಂದರು.

WhatsApp Image 2017-12-09 at 6.48.20 PM

ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕರಾದ ಎಸ್. ನಾಗಣ್ಣ, ರಾಜಶೇಖರ ಕೋಟಿ ನಿಶಾಚರಿ. ಅವರು ರಾತ್ರಿ ವೇಳೆಯಲ್ಲಿ ಕೆಲಸ ಮಾಡುತ್ತಿದ್ದರು. ಹಗಲು ಹೊತ್ತಿನಲ್ಲಿ ನಿದ್ರೆ ಮಾಡುತ್ತಿದ್ದರು. ಅವರಿಗೆ ದೈನಂದಿನ ಶಿಸ್ತು ಇರಲಿಲ್ಲ. ಕರ್ತವ್ಯ ಅವರಿಗೆ ಪರಮ ಗುರಿಯಾಗಿತ್ತು. ಇದರಿಂದಾಗಿ ಅವರ ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು ಎಂದರು.   ರಾಜಶೇಖರ ಕೋಟಿ ಬಾವುಕ ಜೀವಿ. ದ್ವೇಷ ಅವರಿಂದ ದೂರ ಇತ್ತು. ತಮ್ಮ ಪತ್ರಿಕೆಯಿಂದ ಹೊರ ಹೋದ ನಂತರವೂ ಅವರು ಹಳೆಯ ಮಿತ್ರರನ್ನು ಅಷ್ಟೇ ಆತ್ಮೀಯತೆಯಿಂದ ನೋಡುತ್ತಿದ್ದರು. ದೊಡ್ಡ ಪತ್ರಿಕೆಗಳ ನಡುವೆ ಪೈಪೋಟಿ ನಡೆಸುವ ದಿಸೆಯಲ್ಲಿ ಅವರು ನಾಯಕತ್ವ ವಹಿಸಿಕೊಂಡಿದ್ದನ್ನು ನಾಗಣ್ಣ ಸ್ಮರಿಸಿದರು.

ಅಭಿಮಾನಿ ಪ್ರಕಾಶನದ ಮುಖ್ಯಸ್ಥ ಟಿ. ವೆಂಕಟೇಶ್, ಕೋಟಿ ಅವರ ಸ್ನೇಹಕ್ಕೆ ಬೆಲೆ ಕಟ್ಟಲಾಗದು. ನಮ್ಮ ಸಂಸ್ಥೆ ಬೆಳೆಯಲು ಕೋಟಿ ಅವರೇ ಮೂಲ ಕಾರಣ. ನನ್ನ ಹಿನ್ನೆಲೆ ವಿಚಾರಿಸದೇ ಆಗಿನ ಕಾಲದಲ್ಲಿ 20 ಲಕ್ಷ ಸಾಲ ಕೊಡಿಸಿದ್ದರು. ಇದರ ಆಧಾರದ ಮೇಲೆ ತಮ್ಮ ಸಂಸ್ಥೆಯನ್ನು ಕಟ್ಟಿ ಬೆಳೆಸಿದೆ. ಆದರ್ಶಕ್ಕೆ ಅವರು ಮತ್ತೊಂದು ಹೆಸರು ಎಂದರು.

WhatsApp Image 2017-12-09 at 6.48.05 PM

ಹಿರಿಯ ಪತ್ರಕರ್ತ, ಮತ್ತು ಆಂದೋಲನ ಪತ್ರಿಕೆಯ ಬೆಂಗಳೂರು ಪ್ರತಿನಿಧಿ ಆರ್.ಟಿ. ವಿಠಲಮೂರ್ತಿ, 24 ವರ್ಷಗಳ ತಮ್ಮ ಅನುಭವವನ್ನು ಹಂಚಿಕೊಂಡರು. ಕೋಟಿ ಅವರ ಬಗ್ಗೆ ಹಿರಿಯ ಚಿಂತಕ ಖಲೀಲ್ ಗಿಬ್ರಾನ್ ಬರೆದ ಪತಂಗ ಕಥೆಯನ್ನು ಉದಾಹರಿಸಿದರು. ಪತಂಗ ಕತ್ತಲೆಯಿಂದ ಬಂದು ದೀಪ ತಿರುಗಿ ತಿರುಗಿ ನಂತರ ಮತ್ತೆ ಕತ್ತಲೆಯಡೆಗೆ ಸಾಗುತ್ತದೆ. ಇದೇ ರೀತಿ ಕೋಟಿ ಅವರು ಕತ್ತಲಿನಿಂದ ಆದರ್ಶ ಎನ್ನುವ ಬೆಳಕಿನಂತೆ ನಮ್ಮ ಸುತ್ತ ಸದಾ ಸುತ್ತುತ್ತಿದ್ದಾರೆ. ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಬೆಳಕು ಎಂಬ ಆದರ್ಶ ನಮ್ಮೊಂದಿಗಿದೆ ಎಂದು ಹೇಳಿದರು.

ಕೋಟಿ ಅವರು ಸ್ವಾತಂತ್ರ್ಯ ಬಂದಾಗ ಹುಟ್ಟಿ, ಜಾಗತೀಕರಣದ ಈ ಸಮಯದಲ್ಲಿ ತೀರಿಕೊಂಡರು. ಬ್ರಿಟಿಷರೆಂಬ ವಸಹಾತು ಶಾಹಿ ಬಿಟ್ಟು ಹೋದಾಗ ನಮ್ಮಲ್ಲಿ ಭೌದ್ದಿಕ ಆಸ್ತಿ ಇತ್ತು. ಆದರ್ಶವಿತ್ತು. ಅದಕ್ಕಾಗಿ ಅನೇಕ ಜನ ಹೋರಾದ್ದರು. ಆದರೆ ಈಗ ಆರ್ಥಿಕ ಆಸ್ತಿ ಹಿಂದೆ ಓಡುತ್ತಾ, ಭೌಧ್ದಿಕ ಆಸ್ತಿ ಮರೆತಿದ್ದೇವೆ. ಆದರ್ಶಕ್ಕಾಗಿ ಶೇ.10 ರಷ್ಟು ಜನ ಇದ್ದರೆ, ಆರ್ಥಿಕ ಲಾಭಕ್ಕಾಗಿ ಶೆ.90 ಜನರಿದ್ದಾರೆ. ಹೀಗಾಗಿ ಅಸಮಾನತೆ ಹೆಚ್ಚುತಿದೆ. ಅಂತರ ನಿವಾರಿಸುವ ಕಡೆ ಪತ್ರಕರ್ತ ಗಮನಹರಿಸಬೇಕು. ಆರ್ಥಿಕ ಅಸಮಾನತೆ ಹೆಚ್ಚುತಿರುವ ಕಾಲದಲ್ಲಿ ಪತ್ರಕರ್ತ ಹೆಚ್ಚಿನ ಕೆಲಸ ಮಾಡಬೇಕಿದೆ. ಕೋಟಿ ಅವರು ಆದರ್ಶಗಳ ಮೂಲಕ ಹಿರಿಯರ ಬೌದ್ದಿಕ ಆಸ್ತಿಯನ್ನು ನಮಗೆಲ್ಲ ಹಂಚಿದರು. ಆ ಪರಂಪರೆಯನ್ನು ನಾವು ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.

ಹಿರಿಯ ಪತ್ರಕರ್ತ ಮುಮ್ತಾಜ್ ಅಲಿಂ ಮಾತನಾಡಿ, ಕೋಟಿ ಒಬ್ಬರು ದಿವ್ಯಾತ್ಮ ಇದ್ದಂತೆ. ನಮಗೆ ದಾರಿದೀಪ ತೋರಿಸಿದ್ದಾರೆ. ಅವರು ನಿರಂತರ ಜನ ಮಾನಸದಲ್ಲಿ ಉಳಿದಿದ್ದಾರೆ. ಆಂದೋಲನ ನನ್ನ ಪಾಲಿಗೆ ವಾಸ್ತವಿಕ ಶಾಲೆ ಇದ್ದಂತೆ. ಕೋಟಿ ಅವರು ನನಗೆ ಗುರು ಹಾಗೂ ಗೆಳೆಯರಾಗಿ ಪತ್ರಕರ್ತನ ಕೆಲಸ ಕಲಿಸಿಕೊಟ್ಟರು. ಜನಪರ ಕಾಳಜಿ, ಶೋಷಿತರನ್ನು ಮೆಲೆತ್ತುತ್ತಿದ್ದ ರೀತಿ ಅನನ್ಯ. ಹೋರಾಟಗಳಿಗೆ ಧನಿಯಾಗಿದ್ದ ಅವರು ಇಂದಿನವರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.

 

press-1

ಚಿತ್ರ ನಿರ್ದೇಶಕ ಮತ್ತು ಚಿಂತಕ ಟಿ.ಎನ್. ಸೀತಾರಾಂ, ಇಂದಿರಾ ಗಾಂಧಿ ವಿರುದ್ದದ ಹೋರಾಟದ ಕಾಲದಲ್ಲಿ ಅವರು ಪ್ರಖರವಾಗಿದ್ದರು. ಅವರ ಪ್ರೀತಿ ನಿಷ್ಕಳಂಕವಾಗಿತ್ತಿತ್ತು. ಈಗಿನ ಆಧುನಿಕ ಮಾಧ್ಯಮ ವಾಟ್ಸ್ ಅಪ್‌ನಲ್ಲೂ ಅವರು ಹರಿಸುತ್ತಿದ್ದ ವಿಚಾರ ಲಹರಿ ನಮ್ಮೆಲ್ಲರನ್ನು ಚಿಕಿತಗೊಳಿಸುತ್ತಿತ್ತು. ನೇರ ನಡೆ, ನುಡಿ ಹಾಗೂ ಮಾನವೀಯ ಹೃದಯ ಅವರಾಗಿದ್ದ ಎಂದು ಬಣ್ಣಿಸಿದರು.

ಸಾಹಿತಿ, ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್, ತುರ್ತು ಪರಿಸ್ಥಿತಿ ಸಮಯದಲ್ಲಿ ಭೂಗತವಾಗಿ ಪತ್ರಿಕೆ ತಂದಿದ್ದು ಅವರ ಹೆಗ್ಗಳಿಕೆ. ಪ್ರಗತಿಪರವಾಗಿದ್ದ ಅವರು, ಭಾಷಾ ಚಳವಳಿಗಳಿಗೆ, ರೈತ, ದಲಿತ ಚಳವಳಿಗೆ ಮುಖಾಮುಖಿಯಾಗಿದ್ದರು. ಆಂದೋಲನ ಜಿಲ್ಲಾ ಮಟ್ಟದ ಪತ್ರಿಕೆ ಆದರೂ ಅದರ ವ್ಯಾಪ್ತಿ ದೊಡ್ಡದ್ದು. ನಮ್ಮ ಪ್ರೇಮ ವಿವಾಹಕ್ಕೆ ಕೋಟಿ ಅವರಿಗೆ ಮೊದಲ ಆಮಂತ್ರಣ ನೀಡಿದ್ದೆ. ಅವರು ಪತ್ರಿಕೆಯಲ್ಲಿ ಒಂದು ಸಣ್ಣ ಸುದ್ದಿ ಪ್ರಕಟಿಸಿದ್ದರು. ಅದನು ನೋಡಿ ಮದುವೆಗೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಆದರೆ ಯಾರಿಗೂ ಊಟದ ವ್ಯವಸ್ಥೆ ಇರಲಿಲ್ಲ. ಆದರೆ ಬಂದ ಪ್ರಗತಿಪರರೆಲ್ಲಾ ನಮ್ಮನ್ನು ಹಾರೈಸಿ ಹೋಗಿದ್ದು ತಮಗೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ ಎಂದರು.

WhatsApp Image 2017-12-09 at 5.52.34 PM

ಹೋರಾಟಗಾರ್ತಿ ಡಾ: ಲೀಲಾ ಸಂಪಿಗೆ, ಹಸಿವಿಗೆ ತುತ್ತಾಗಿದ್ದಾಗ ನಮ್ಮನ್ನು ಆಂದೋಲನ ಸಾಕಿ ಸಲಹಿದೆ. ವ್ಯವಸ್ಥೆ ಎದುರು ಹಾಕಿಕೊಂಡು ಮದುವೆ ಆದಾಗ ಊಟ ಕೊಟ್ಟು ಬೆಂಬಲಿಸಿದ್ದು ಇದೇ ಕೋಟಿ. ಮದುವೆಯ ಊಟ ಅವರ ಮನೆಯಲ್ಲಿ ವ್ಯವಸ್ಥೆಯಾಗಿತ್ತು. ಹೋರಾಟಕ್ಕೆ ಬೆನ್ನುಲುಬಾಗಿ ನಿಂತಿದ್ದರು. ಎಡ ಪ್ರಜಾಸತ್ತಾತ್ಮಕ ಚಳವಳಿಗೆ ಆಧಾರಸ್ತಂಭವಾಗಿದ್ದರು. ನಮ್ಮೆಲ್ಲಾ ಹೋರಾಟಗಳಿಗೆ ಅವರು ನಿಜಕ್ಕೂ ಬೆಂಬಲವಾಗಿ ನಿಂತಿದ್ದರು ಎಂದರು.

ಹಿರಿಯ ಪತ್ರಕರ್ತ, ಕೃಷಿ ತಜ್ಞ ನಾಗೇಶ್, ಕೋಟಿ ಅವರು ರೈತ ಸಂಘದ ಕಾರ್ಯಕ್ರಮಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದರು. ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ರೈತರ ಸುದ್ದಿ ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾಗದೇ ಇರುವ ದಿನವೇ ಇಲ್ಲ ಎಂದು ಸ್ಮರಿಸಿಕೊಂಡರು.   ಬ್ಯುಸಿನೆಲ್ ಲೈನ್ ಪತ್ರಿಕೆಯ ಅನಿಲ್ ಅರಸ್, ಯು.ಎನ್.ಐನ ರವಿಶಂಕರ್, ಗೃಹ ಶೋಭಾ ಪತ್ರಿಕೆಯ ಶಂಕರ್, ಹಿರಿಯ ಪತ್ರಕರ್ತ ಶಿವಕುಮಾರ್ ಬೋಶೆಟ್ಟಿ ಮತ್ತಿತರರು ಕೋಟಿ ಅವರೊಂದ

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin