ನನ್ನ ಬಳಿ 224 ಕ್ಷೇತ್ರಗಳ ಸಂಪೂರ್ಣ ಮಾಹಿತಿ ಇದೆ : ಸಿಎಂಗೆ ಸದಾನಂದಗೌಡ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Sadanandagowda--02

ಬೆಂಗಳೂರು, ಡಿ.10-ನನ್ನ ಬಳಿ 224 ಕ್ಷೇತ್ರಗಳ ಸಂಪೂರ್ಣ ಮಾಹಿತಿ ಇದೆ. ಅಲ್ಲದೆ ಈ ಕ್ಷೇತ್ರಗಳನ್ನು 4 ವರ್ಷಗಳ ಅವಧಿಯಲ್ಲಿ ಉತ್ತಮಗೊಳಿಸಿದ್ದೇನೆ ಎಂದು ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.  ಟಿ.ದಾಸರಹಳ್ಳಿಯ ತ್ರಿವೇಣಿ ಪಬ್ಲಿಕ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಕೌಶಲ್ಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗಿಂತ ಮೊದಲು ಸಿಎಂ ಆಗಿದ್ದು ನಾನು. 224 ವಿಧಾನಸಭಾ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯನವರು ನನ್ನನ್ನು ಪ್ರಶ್ನೆ ಮಾಡುತ್ತಿರುವುದು ಅವರ ಬಾಲ್ಯಾವಸ್ಥೆಯನ್ನು ತೋರಿಸುತ್ತಿದೆ. ಅವರ ಕ್ಷೇತ್ರದ ನಾಲೆಗೇ ನೀರು ಬಿಟ್ಟಿಲ್ಲ. ಇನ್ನು ರಾಜ್ಯದ ಅಭಿವೃದ್ಧಿಯನ್ನು ಹೇಗೆ ಮಾಡುತ್ತಾರೆ ಎಂದು ಟೀಕಿಸಿದರು.  ಮುಂದಿನ ಚುನಾವಣೆಯಲ್ಲಿ ಅವರ ಮಗನನ್ನು ಚುನಾವಣೆಗೆ ನಿಲ್ಲಿಸುತ್ತಿರುವುದು ಪಲಾಯನಕ್ಕೆ ಪುಷ್ಠಿ ಕೊಡುವಂತಿದ್ದು, ಅವರು ಸೋಲುತ್ತೇವೆ ಎಂದು ಒಪ್ಪಿಕೊಂಡಂತಾಗಿದೆ ಎಂದು ಲೇವಡಿ ಮಾಡಿದರು.  ಮುಖ್ಯಮಂತ್ರಿ ಅವರು ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ. ಆದರೆ ಅವರ ಮೌಢ್ಯದ ಬಗ್ಗೆಯೇ ನನಗೆ ಅಚ್ಚರಿಯಾಗುತ್ತಿದೆ. 2018ರ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯನವರು ತೊಘಲಕ್ ದರ್ಬಾರ್ ಬಿಡಬೇಕು. ನಾನು ಕೇಂದ್ರ ಕ್ಯಾಬಿನೆಟ್ ದರ್ಜೆಯ 7ನೇ ಮಂತ್ರಿಯಾಗಿದ್ದು , 17 ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 5 ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರವಿದೆ. ಮುಂದಿನ ಚುನಾವಣೆಯಲ್ಲಿ ಖಂಡಿತ ಕಾಂಗ್ರೆಸ್ ಪಕ್ಷ 3ನೇ ಸ್ಥಾನಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಮುದ್ರ ಯೋಜನೆಗೆ ಒತ್ತು:

ಮುದ್ರಾ ಯೋಜನೆಗೆ ಹೆಚ್ಚು ಒತ್ತು ಕೊಡಬೇಕು. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಲಂಚ ಪಡೆಯುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಬ್ಯಾಂಕ್ ಅಧಿಕಾರಿಗಳು ದೇಶಕ್ಕಾಗಿ ಕೆಲಸ ಮಾಡಬೇಕು ಎಂದರು.  ಅಧಿಕಾರಿಗಳಿಗೆ ಜನರ ತೆರಿಗೆಯಿಂದ ಸಂಬಳ ನೀಡಲಾಗುತ್ತದೆ. ಆದ್ದರಿಂದ ಜನ ಸೇವೆಗಾಗಿ ಕೆಲಸ ಮಾಡಬೇಕು. ಈ ಉದ್ಯೋಗಮೇಳವು ಯುವಕರಲ್ಲಿ ಉದ್ಯೋಗದ ಭರವಸೆ ನೀಡಲಿದೆ. ಬಡವರಿಗೆ ಕೆಲಸ ಕೊಡಿಸುವುದು ಪುಣ್ಯದ ಕೆಲಸ. ಇದರಿಂದ ಯುವಕರಿಗೂ ಶಕ್ತಿತುಂಬಿ ನಾವು ಶಕ್ತಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಮುನಿರಾಜು ಮಾತನಾಡಿ, ಈ ಉದ್ಯೋಗ ಮೇಳಕ್ಕೆ ಎಲ್ಲ ಕಡೆಯಿಂದ ಉದ್ಯೋಗವರಿಸಿಕೊಂಡು ಬಂದಿದ್ದಾರೆ. ಅವರಿಗೆ ಉದ್ಯೋಗ ಕೊಡುವುದು ನಮ್ಮ ಜವಾಬ್ದಾರಿ. ಮುಖ್ಯವಾಗಿ ನನ್ನ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡುತ್ತೇನೆ ಎಂದರು.  ಪ್ರತಿ ಮೂರು ತಿಂಗಳಿಗೊಮ್ಮೆ ಉದ್ಯೋಗ ಮೇಳ ನಡೆಸಲಾಗುತ್ತಿದ್ದು, ಉದ್ಯೋಗಸ್ಥರು ತಮ್ಮ ನೆಚ್ಚಿನ ಉದ್ಯೋಗವನ್ನು ಪಡೆಯಬಹುದು. ಈ ಬಾರಿ ನೋಂದಣಿ ಮಾಡಿಕೊಂಡಿರುವವರಿಗೆ ಉದ್ಯೋಗ ದೊರೆಯದಿದ್ದರೆ, ಮುಂದಿನ ಉದ್ಯೋಗ ಮೇಳದಲ್ಲಿ ಅವರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು.
ಕಾಪೆರ್Çೀರೇಟರ್‍ಗಳಾದ ಲೋಕೇಶ್, ಸರ್ವಮಂಗಳ, ಉಮಾದೇವಿ ನಾಗರಾಜ್ ಮತ್ತಿತರರು ಇದ್ದರು.

Facebook Comments

Sri Raghav

Admin