ಜೆರುಸಲೆಂ ಘೋಷಣೆ ಹಿಂಪಡೆಯಲು ಟ್ರಂಪ್‍ಗೆ ಅರಬ್ ಸಚಿವರ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Jeroceleman--02

ವಾಷಿಂಗ್ಟನ್, ಡಿ.10-ಇಸ್ರೇಲ್ ರಾಜಧಾನಿಯನ್ನಾಗಿ ಜೆರುಸಲೆಂನನ್ನು ಘೋಷಿಸಿರುವ ತಮ್ಮ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದಕ್ಕೆ ಪಡೆಯಬೇಕೆಂದು ಅರಬ್ ರಾಷ್ಟ್ರಗಳ ವಿದೇಶಾಂಗ ಸಚಿವರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಇಸ್ರೇಲ್ ರಾಜಧಾನಿಯನ್ನಾಗಿ ಜೆರುಸಲೆಂನನ್ನು ಮಾನ್ಯ ಮಾಡಲು ಟ್ರಂಪ್ ಘೋಷಿಸಿರುವುದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್‍ಎಸ್‍ಸಿ) ಸಭೆಯಲ್ಲಿ ನಿರೀಕ್ಷಿತ ಬೆಂಬಲ ದೊರೆಯದೇ ವಾಷಿಂಗ್ಟನ್‍ಗೆ ಮುಖಭಂಗವಾದ ಬೆನ್ನಲ್ಲೇ ಅರಬ್ ರಾಷ್ಟ್ರಗಳು ಈ ವಿಷಯದಲ್ಲಿ ತನ್ನ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿವೆ.

ಇದೊಂದು ಆತಂಕಕಾರಿ ಬೆಳವಣಿಗೆ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಅರಬ್ ದೇಶಗಳ ವಿದೇಶಾಂಗ ಸಚಿವರು ಟೀಕಿಸಿದ್ದಾರೆ. ಅಲ್ಲದೇ ಟ್ರಂಪ್ ನಿರ್ಧಾರವನ್ನು ಖಂಡಿಸುವ ನಿರ್ಣಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಂಗೀಕರಿಸುವಂತೆಯೂ ಆಗ್ರಹಿಸಿದ್ದಾರೆ. ಜೆರುಸಲೆಂನನ್ನು ಇಸ್ರೇಲ್ ರಾಜಧಾನಿಯನ್ನಾಗಿ ಘೋಷಿಸುವ ಹಾಗೂ ಅಮೆರಿಕದ ರಾಯಭಾರಿ ಕಚೇರಿಯನ್ನು ಟೆಲ್‍ಅವಿವ್‍ನಿಂದ ಜೆರುಸಲೆಂಗೆ ಸ್ಥಳಾಂತರಿಸುವ ನಿರ್ಧಾರವನ್ನು ನಾವು ಒಪ್ಪುವುದಿಲ್ಲ ಎಂದು ಬ್ರಿಟನ್, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಸ್ವೀಡನ್ ದೇಶಗಳು ನಿನ್ನೆಯಷ್ಟೇ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದವು.

Facebook Comments

Sri Raghav

Admin