ನಿಮ್ಮ ಚುನಾವಣಾ ರಾಜಕೀಯಕ್ಕೆ ನಮ್ಮನ್ನು ಎಳೆಯಬೇಡಿ : ಭಾರತಕ್ಕೆ ಪಾಕ್ ವರಾತ

ಈ ಸುದ್ದಿಯನ್ನು ಶೇರ್ ಮಾಡಿ

Pakistan--Census

ಇಸ್ಲಾಮಾಬಾದ್, ಡಿ.11-ಗುಜರಾತ್ ವಿಧಾನಸಭೆ ಚುನಾವಣೆಗಳ ಪ್ರಚಾರದಲ್ಲಿ ಸ್ಥಳೀಯ ರಾಜಕೀಯದಲ್ಲಿ ತಮ್ಮನ್ನು ಎಳೆಯಬೇಡಿ ಎಂದು ಭಾರತದ ರಾಜಕಾರಣಿಗಳಿಗೆ ಪಾಕಿಸ್ತಾನ ಸಲಹೆ ಮಾಡಿದೆ. ಚುನಾವಣಾ ವಿಷಯಗಳ ಚರ್ಚೆಯಲ್ಲಿ ಪಾಕಿಸ್ತಾನವನ್ನು ಎಳೆದು ತರುವುದನ್ನು ಭಾರತ ನಿಲ್ಲಿಸಬೇಕು. ಆಧಾರ ರಹಿತ ಮತ್ತು ಬೇಜವಾಬ್ದಾರಿಯುತ ಹೇಳಿಕೆಗಳ ಮೂಲಕ ಪಿತೂರಿ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ತನ್ನ ಸ್ವಂತ ಬಲದ ಮೇಲೆ ಚುನಾವಣೆಗಳಲ್ಲಿ ಗೆಲ್ಲುವುದನ್ನು ಬಿಟ್ಟು, ಪಾಕಿಸ್ತಾನವನ್ನು ಮಧ್ಯಕ್ಕೆ ತರುವುದು ಏಕೆ ಎಂದು ವಿದೇಶಾಂಗ ಸಚಿವ ಮಹಮದ್ ಫೈಸಲ್ ಟ್ವೀಟರ್‍ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಗುಜರಾತ್ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಲು ಪಾಕಿಸ್ತಾನ ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಈ ಹೇಳಿಕೆ ಇಂದು ದೇಶದ ಪ್ರಮುಖ ದಿನಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾಗಿತ್ತು. ಈ ಹೇಳಿಕೆಗೆ ಪಾಕಿಸ್ತಾನ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

Facebook Comments

Sri Raghav

Admin