2016ರಿಂದ ರೈಲುಗಳಲ್ಲಿ ಶೇ.34 ಅಪರಾಧ ಪ್ರಕರಣಗಳ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Railway-n-02

ನವದೆಹಲಿ, ಡಿ.11- ರೈಲುಗಳಲ್ಲಿ ಪ್ರಯಾಣಿಸುವುದು ಸುರಕ್ಷತೆವೇ? ನಿಮ್ಮ ವಸ್ತುಗಳು ಜೋಪಾನವಾಗಿರುತ್ತವೇ? ಎಂಬ ಪ್ರಶ್ನೆ ಈಗ ರೈಲ್ವೆ ಪ್ರಯಾಣಿಕರನ್ನು ತುಂಬಾ ಕಾಡುತ್ತಿದೆ. ಒಂದೆಡೆ ರೈಲು ಅಪಘಾತಗಳಿಂದ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ರೈಲಿನಲ್ಲಿ ನಿದ್ರೆಗೆ ಜಾರಿದರೆ ಸಾಕು ತಮ್ಮ ಅಮೂಲ್ಯ ವಸ್ತುಗಳು ಕಳುವಾಗುತ್ತಿವೆ, ಈ ಪ್ರಕರಣಗಳು ಕಳೆದ ಎರಡು ವರ್ಷಗಳಿಂದ ಶೇ.34ರಷ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಪರಾಧ ದಳವೇ ಸ್ಪಷ್ಟಪಡಿಸಿದೆ.  ರೈಲ್ಲಿನಲ್ಲಿ ನಡೆಯುವಂತಹ ಅಪರಾಧ ಕೃತ್ಯಗಳಾದ ಕೊಲೆ, ರೇಪ್, ಕಳವು, ಕಿಡ್ನ್ಯಾಪ್ ಪ್ರಕರಣಗಳು 2016 ರಲ್ಲಿ 42, 388ಕ್ಕೆ ಏರಿದೆ 2015ರಲ್ಲಿ ಇದರ ಪ್ರಮಾಣ 39,329 ರಷ್ಟಿದ್ದರೆ, 2014ರಲ್ಲಿ 21,609 ಪ್ರಕರಣಗಳು ದಾಖಲಾಗಿದ್ದವು.

ಮಹಾರಾಷ್ಟ್ರವೇ ಮುಂದು:

ರೈಲುಗಳಲ್ಲಿ ಇಂತಹ ಅಪರಾಧ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆ. ಜನವರಿ 1 ರಿಂದ ಡಿಸೆಂಬರ್ 31, 2016ರವರೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶಗಳಲ್ಲಿ ಸಂಚರಿಸುವ ರೈಲುಗಳಲ್ಲಿ 8,293 ದೂರುಗಳು ದಾಖಲಾಗಿದ್ದರೆ, ಮಹಾರಾಷ್ಟ್ರ (7,358), ಮಧ್ಯಪ್ರದೇಶ (5,082), ದೇಶದ ರಜಧಾನಿ ನವದೆಹಲಿ (4,306), ಬಿಹಾರ (2,287) ನಂತರ ಸ್ಥಾನಗಳಲ್ಲಿವೆ.

ಕಳ್ಳತನವೇ ಹೆಚ್ಚು:

ರೈಲ್ವೆ ಪೊಲೀಸರ ಪ್ರಕಾರ ರೈಲುಗಳಲ್ಲಿ ನಡೆಯುವ ಅಪರಾಧ ಕೃತ್ಯಗಳಲ್ಲಿ ಕಳ್ಳತನದ್ದೇ ಮೇಲುಗೈ ಆಗಿದೆ. 2016ರಿಂದ ರೈಲುಗಳಲ್ಲಿ ಸುಮಾರು 42,388 ಕಳ್ಳತನ ಪ್ರಕರಣಗಳಾಗಿದ್ದು ಅವುಗಳ ಪೈಕಿ 33,682 ದೂರುಗಳು ದಾಖಲಾಗಿದೆ. ಇನ್ನು ದರೋಡೆ (1,069), ಅಪಹರಣ (280) ಪ್ರಕರಣಗಳಾಗಿವೆ.
ರೈಲುಗಳಲ್ಲಿ ಸುಮಾರು 236 ಕೊಲೆಗಳಾಗಿದ್ದರೆ, 125 ಆತ್ಮಹತ್ಯೆಗೆ ಯತ್ನ , 79 ಅತ್ಯಾಚಾರಗಳು ಕೂಡ ನಡೆದಿದೆ. ವಿಶೇಷ ಮತ್ತು ಸ್ಥಳೀಯ ಕಾನೂನುಗಳು (ಎಸ್‍ಎಲïಎಲï) ಅಪರಾಧಗಳ ಅಡಿಯಲ್ಲಿ ದೇಶಾದ್ಯಂತ 19,564 ಪ್ರಕರಣಗಳು ವರದಿಯಾಗಿವೆ. 2016 ರಲ್ಲಿ ಜಿಆರ್‍ಪಿಯ ನಿಷೇಧದ ಕಾಯ್ದೆ ಅಥವಾ ಜೂಜಿನ ಅಧಿನಿಯಮ, ವಿದ್ಯುಚ್ಛಕ್ತಿ ಉಲ್ಲಂಘನೆಯಂತೆ ಉಲ್ಲಂಘನೆಯಾಗಿದೆ.  ಕೇರಳದಲ್ಲಿ 7,371 ಪ್ರಕರಣಗಳು (7,151 ಕೇರಳ ಪೊಲೀಸ್ ಆಕ್ಟ್ ಮತ್ತು ಕೊಟ್ಫಾ ಕಾಯಿದೆಯಡಿ 88 ಪ್ರಕರಣಗಳು)ದಾಖಲಾಗಿದ್ದರೆ , ಗುಜರಾತ್ (7,371), ಯುಪಿ (2,625) ಮತ್ತು ಬಿಹಾರ (1,235) ದಾಖಲಾಗಿವೆ. ರೈಲ್ವೆ ಪ್ರಯಾಣಿಕರ ಹಿತದೃಷ್ಟಿಯಿಂದ ರೈಲು ನಿಲ್ದಾಣಗಳು, ರೈಲುಗಳಲ್ಲಿ ಸಾಕಷ್ಟು ಜಾಗೃತೆಯನ್ನು ವಹಿಸಿದರೂ ಕೂಡ ಇಂತಹ ಅಪರಾಧ ಕೃತ್ಯಗಳು ನಡೆಯುತ್ತಿರುವುದು ಮಾತ್ರ ಪ್ರಯಾಣಿಕರು ಭಯದಿಂದಲೇ ಪ್ರಯಾಣ ಮಾಡುವಂತಹ ಸ್ಥಿತಿ ಎದುರಾಗಿದೆ.

Facebook Comments

Sri Raghav

Admin