ದೇವಾಲಯದ ವಿಗ್ರಹ ಕದಿಯಲು ಬಂದ ಕಳ್ಳನಿಗೆ ಗ್ರಾಮಸ್ಥರಿಂದ ‘ಮಹಾ ಮಂಗಳಾರತಿ’

ಈ ಸುದ್ದಿಯನ್ನು ಶೇರ್ ಮಾಡಿ

Chitradurga--01

ಚಿತ್ರದುರ್ಗ, ಡಿ.12- ವಿಗ್ರಹ ಕದಿಯಲು ಬಂದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದಿದೆ. ಚಿಕ್ಕನಾಯಕನಹಳ್ಳಿ ಮೂಲದ ಪರಮೇಶ್ವರ ಸಿಕ್ಕಿಬಿದ್ದ ವಿಗ್ರಹ ಕಳ್ಳ. ಕಳೆದ ಕೊಂಡೆಸೀತಮ್ಮ ದೇವಸ್ಥಾನದಲ್ಲಿ ವಿಗ್ರಹ ಕದಿಯಲು ಮೂವರು ಕಳ್ಳರು ಬಂದಿದ್ದು, ದೇವಾಲಯದ ಬೀಗ ಒಡೆಯುವ ಸಂದರ್ಭದಲ್ಲಿ ಶಬ್ಧದಿಂದ ಎಚ್ಚರಗೊಂಡ ಅಕ್ಕಪಕ್ಕದವರು ದೇವಾಲಯದ ಬಳಿ ಬಂದು ನೋಡಿದಾಗ ಕಳ್ಳತಕ್ಕೆ ಯತ್ನಿಸಿರುವುದು ತಿಳಿದು ಬಂದಿದೆ.

ಗ್ರಾಮಸ್ಥರನ್ನು ನೋಡಿದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಒಬ್ಬ ಸಿಕ್ಕಿ ಹಾಕಿಕೊಂಡಿದ್ದು, ಆತನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ತಾಲ್ಲೂಕಿನ ಧರ್ಮಪುರದಲ್ಲಿ ಚಾಮುಂಡೇಶ್ವರಿ ವಿಗ್ರಹ ಕಳ್ಳತನವಾಗಿತ್ತು. ನಿಧಿ ಆಸೆಗಾಗಿ ಗೊತ್ತಿರುವವರೇ ಪೂಜೆ ಪುನಸ್ಕಾರಗಳನ್ನು ಮಾಡಿ ಗ್ರಾಮಸ್ಥರಿಗೆ ಭಯ ಹುಟ್ಟಿಸಿ ದೇವಾಲಯದ ವಿಗ್ರಹಗಳನ್ನು ಕದಿಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಅಬ್ಬಿನಹೊಳೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin