ತೆರಿಗೆ ವಂಚನೆ : ಬೆಂಗಳೂರು ಸೇರಿ ದೇಶಾದ್ಯಂತ ಬಿಟ್‍ಕಾಯಿನ್ ವಿನಿಮಯದ ಸರ್ವೆ

ಈ ಸುದ್ದಿಯನ್ನು ಶೇರ್ ಮಾಡಿ

Bitcoin--01

ನವದೆಹಲಿ, ಡಿ. 13-ತೆರಿಗೆ ವಂಚನೆ ಮತ್ತು ಅಕ್ರಮ-ಅವ್ಯವಹಾರಗಳ ಸಂಶಯದ ಮೇಲೆ ಆದಾಯ ತೆರಿಗೆ ಇಲಾಖೆ ಇಂದು ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಪ್ರಮುಖ ಬಿಟ್‍ಕಾಯಿನ್ ವಿನಿಮಯಗಳ ಕಾರ್ಯನಿರ್ವಹಣೆ ಬಗ್ಗೆ ಸರ್ವೆ ನಡೆಸಿದೆ. ಈ ಸರ್ವೆ ಸಂದರ್ಭದಲ್ಲಿ ಭಾರೀ ಪ್ರಮಾಣದ ತೆರಿಗೆ ವಂಚನೆ ಮತ್ತು ಅಕ್ರಮ ವಹಿವಾಟುಗಳು ಪತ್ತೆಯಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇಲಾಖೆ ಅಧಿಕಾರಿಗಳು ಬೆಂಗಳೂರು, ದೆಹಲಿ, ಹೈದರಾಬಾದ್, ಕೊಚ್ಚಿ, ಗುರುಗ್ರಾಮ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಈ ಸರ್ವೆ ಕಾರ್ಯ ಕೈಗೊಂಡರು. ಬೆಂಗಳೂರು ತನಿಖಾ ಘಟಕದ ಮಾರ್ಗದರ್ಶನದಲ್ಲಿ ಐಟಿ ಇಲಾಖೆ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದರು. ಉದ್ಯಮಿಗಳು, ದೊಡ್ಡ ವರ್ತಕರು, ವಹಿವಾಟುದಾರರೂ ಸೇರಿದಂತೆ ವಿವಿಧ ವಾಣಿಜ್ಯ ಕೇಂದ್ರಗಳಲ್ಲಿ ಈ ಸರ್ವೆ ಕಾರ್ಐ ನಡೆದಿದೆ.

Facebook Comments

Sri Raghav

Admin