ನನ್ನ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಹುಟ್ಟಲ್ಲ : ಅಣ್ಣಾ ಹಜಾರೆ

ಈ ಸುದ್ದಿಯನ್ನು ಶೇರ್ ಮಾಡಿ

Kejriwal--02

ಆಗ್ರಾ, ಡಿ.13-ನವದೆಹಲಿ ಮುಖ್ಯಮಂತ್ರಿ ಮತ್ತು ಅಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬಗ್ಗೆ ಅಗಾಗ ವಾಗ್ದಾಳಿ ನಡೆಸುತ್ತಿರುವ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಮ್ಮ ಮಾಜಿ ಶಿಷ್ಯನ ಬಗ್ಗೆ ಮತ್ತೆ ಮುನಿಸಿಕೊಂಡಿದ್ದಾರೆ. ನನ್ನ ಮುಂದಿನ ಚಳವಳಿಯಲ್ಲಿ ಕೇಜ್ರಿವಾಲ್ ನಂತವರು ಭಾಗವಹಿಸುವುದಿಲ್ಲ., ಕೇಜ್ರಿವಾಲ್ ನಂತವರ ಹುಟ್ಟಿಗೆ ಮತ್ತೊಮ್ಮೆ ನನ್ನ ಚಳುವಳಿ  ಕಾರಣವಾಗಲ್ಲ ಎಂದು ಅವರು ತಿಳಿಸಿದ್ದಾರೆ.  ಆಗ್ರಾದಲ್ಲಿ ನಿನ್ನೆ ಶಾಹಿದ್ ಸ್ಮಾರಕದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 23ರಂದು ದೆಹಲಿಯಲ್ಲಿ ರೈತರ ಹಿತರಕ್ಷಣೆಗಾಗಿ ಕೇಂದ್ರದ ಗಮನಸೆಳೆಯಲು ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಆಗಿನ ಯುಪಿಎ ಸರ್ಕಾರ ಮತ್ತು ಈಗಿನ ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಜನ್ ಲೋಕಪಾಲ್ ಮಸೂದೆ ಅನುಷ್ಠಾನಕ್ಕೆ ಸಂಪೂರ್ಣ ವಿಫಲವಾದವು ಎಂದು ಹಜಾರೆ ಟೀಕಿಸಿದರು.

Facebook Comments

Sri Raghav

Admin