ಬಹುಕೋಟಿ ಕಲ್ಲಿದ್ದಲು ಹಗರಣದಲ್ಲಿ ಜಾರ್ಖಂಡ್ ಮಾಜಿ ಸಿಎಂ ಮಧುಕೋಡಾ ಅಪರಾಧಿ

ಈ ಸುದ್ದಿಯನ್ನು ಶೇರ್ ಮಾಡಿ

Madhu-Koda--02

ನವದೆಹಲಿ, ಡಿ.13-ಬಹುಕೋಟಿ ಕಲ್ಲಿದ್ದಲು ಹಗರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಇಂದು ಭ್ರಷ್ಟಾಚಾರ ಮತ್ತು ಇತರ ಆರೋಪಗಳಲ್ಲಿ ಅಪರಾಧಿ ಎಂದು ಪರಿಗಣಿಸಿದೆ. ಈ ತೀರ್ಪಿನಿಂದಾಗಿ ಕೋಡಾ ಕೊರಳಿಗೆ ಕಾನೂನು ಉರುಳು ಮತ್ತಷ್ಟು ಬಲವಾಗಿ ಸುತ್ತಿಕೊಂಡಂತಾಗಿದೆ. ಸಿಬಿಐ ವಿಶೇಷ ನ್ಯಾಯಾಧೀಶರಾದ ನ್ಯಾ.ಭರತ್ ಪರಶರ್ ಈ ಹಗರಣದಲ್ಲಿ ರಾಜ್ಯದ ಕಲ್ಲಿದ್ದಲು ಇಲಾಖೆ ಕಾರ್ಯದರ್ಶಿ ಎಚ್.ಸಿ.ಗುಪ್ತಾ ಮತ್ತು ಇತರರ ಆರೋಪಗಳೂ ಸಹ ಸಾಬೀತಾಗಿದ್ದು, ಅವರನ್ನೂ ಸಹ ದೋಷಿಗಳು ಎಂದು ದೋಷಿಸಿದರು.

ಜಾರ್ಖಂಡ್ ಮಾಜಿ ಮುಖ್ಯ ಕಾರ್ಯದರ್ಶಿ ಎಸ್.ಕೆ.ಬಸು ಮತ್ತು ಕೋಲ್ಕತಾ ಮೂಲದ ವಿನಿ ಐರನ್ ಅಂಡ್ ಸ್ಟೀಲ್ ಉದ್ಯೋಗ್ ಲಿಮಿಟೆಡ್(ವಿಐಎಸ್‍ಯುಎಲ್) ಸಂಸ್ಥೆಯನ್ನೂ ಕೂಡ ಅಪರಾಧಿಗಳು ಎಂದು ತೀರ್ಪು ನೀಡಲಾಗಿದೆ. ಈ ಹಗರಣದಲ್ಲಿ ದೋಷಿ ಎಂದು ಘೋಷಿತರಾಗಿರುವವರ ಶಿಕ್ಷೆ ಪ್ರಮಾಣ ಮತ್ತು ಸ್ವರೂಪವನ್ನು ಕೋರ್ಟ್ ನಾಳೆ ಪ್ರಕಟಿಸಲಿದೆ.

ಈ ಪ್ರಕರಣದಲ್ಲಿ ಇತರ ನಾಲ್ವರನ್ನು ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದೆ. ಜಾರ್ಖಂಡ್‍ನಲ್ಲಿರುವ ರಾಜ್‍ಹರ ನಾರ್ತ್ ಕಲ್ಲಿದ್ದಲು ನಿಕ್ಷೇಪವನ್ನು ಕೋಲ್ಕತಾ ಮೂಲದ ವಿನಿ ಐರನ್ ಅಂಡ್ ಸ್ಟೀಲ್ ಉದ್ಯೋಗ್ ಲಿಮಿಟೆಡ್ (ವಿಐಎಸ್‍ಯುಎಲ್) ಸಂಸ್ಥೆಗೆ ಮಂಜೂರು ಮಾಡುವ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ-ಅವ್ಯವಹಾರಗಳು ನಡೆದಿದ್ದವು. ಈ ಪ್ರಕರಣದಲ್ಲಿ ಮಧು ಕೋಡಾ, ಎಚ್.ಸಿ.ಗುಪ್ತಾ ಮತ್ತು ಇತರ ಆರು ಮಂದಿ ವಿರುದ್ಧ ಒಳಸಂಚು ಸೇರಿದಂತೆ ಗಂಭೀರ ಆರೋಪಗಳು ಕೇಳಿ ಬಂದಿದ್ದವು.

Facebook Comments

Sri Raghav

Admin